ಸರ್ಕಾರ ಉಳಿಯುತ್ತಾ, ಉರುಳುತ್ತಾ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರದ ವಿರುದ್ಧ ಬಂಡೆದ್ದಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್ ಶಾಸಕರು ಮುಂಬೈ ಸೇರಿದ್ದಾರೆ. ಬಿಜೆಪಿ ನಾಯಕರ ಅಣತಿಯಂತೆ ವಾಸ್ತವ್ಯ ಹೂಡಿರುವ ಅತೃಪ್ತ ನಾಯಕರು ಸರ್ಕಾರಕ್ಕೆ ನಮ್ಮ ಬೆಂಬಲ ಇಲ್ಲ. ನಾವು ರಾಜೀನಾಮೆ ನೀಡಿದ್ದೇವೆ ಅಂಗೀಕರಿಸಿ ಎಂದು ಒತ್ತಾಯ ಮಾಡಿದ್ದಾರೆ. ಇಂದು ಎಲ್ಲಾ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಎದುರು ಹಾಜರಾಗಬೇಕಿದೆ. ಜೊತೆಗೆ ರಾಜೀನಾಮೆಗೆ ಕಾರಣ ತಿಳಿಸಬೇಕಿದೆ. ಒಂದು ವೇಳೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಸಕರು ನೀಡುತ್ತಿರುವ ಕಾರಣ ಸರಿಯಾಗಿದೆ ಎನಿಸಿದರೆ ರಾಜೀನಾಮೆಯನ್ನು ಕೂಡಲೇ ಅಂಗೀಕಾರ ಮಾಡಬಹುದು. ಒಂದು ವೇಳೆ ಯಾರದ್ದೋ ಒತ್ತಡದಿಂದ ಈ ರೀತಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಅನ್ನೋ ಅನುಮಾನ ಬಂದರೆ, ರಾಜೀನಾಮೆ ಅಂಗೀಕಾರ ಮಾಡುವ ಬದಲು ಸ್ವಲ್ಪ ದಿನ ಕಾಯುವಂತೆ ಸೂಚನೆ ಕೊಡಬಹುದು.

ಇಷ್ಟೆಲ್ಲಾ ಸಾಧ್ಯತೆಗಳಿರುವಾಗ ಸರ್ಕಾರ ತಕ್ಷಣಕ್ಕೆ ಬೀಳಲಿದೆ ಎಂದರೆ ನಂಬಲು ಅಸಾಧ್ಯ. ಯಾಕಂದ್ರೆ ಸರ್ಕಾರ ಉಳಿಸಲು ಮೈತ್ರಿ ನಾಯಕರಿಗೆ ನೂರಾರು ಮಾರ್ಗಗಳಿವೆ. ಅವು ಏನೆಂದು ನೋಡುವುದಾದರೆ…

ಈಗಾಗಲೇ ಕಾಂಗ್ರೆಸ್ ಎಲ್ಲಾ 21 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಅದೇ ರೀತಿ ಜೆಡಿಎಸ್‌ನ ಎಲ್ಲಾ ಸಚಿವರು ಹುದ್ದೆ ತೊರೆಯಲು ಮುಂದಾಗಿದ್ದು, ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂದು ಸ್ವತಃ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಜೊತೆಗೆ ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ ಮಾಡಲಾಗುವುದು ಎನ್ನುವ ಅಂಶವನ್ನು ಸಿಎಂ ಹೇಳಿದ್ದಾರೆ. ಅತ್ತ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಸಂದೇಶ ರವಾನಿಸಿದ್ದು, ಸಚಿವ ಸ್ಥಾನ ಸಿಗಲಿಲ್ಲ ಎಂದು ಯಾರೆಲ್ಲಾ ಬೇಸರ ಮಾಡಿಕೊಂಡು ರಾಜೀನಾಮೆ ನೀಡಿ, ಮುಂಬೈ ಸೇರಿದ್ದೀರಿ ಅವರೆಲ್ಲರೂ ವಾಪಸ್ ಬಂದರೆ ಸಚಿವರನ್ನಾಗಿ ಮಾಡಲಾಗುವುದು ಎಂದಿದ್ದಾರೆ.

ಇದೀಗ ಮನವೊಲಿಕೆ ಮಾಡ್ತಾರೆ ಅನ್ನೋ ಮಾಹಿತಿ ತಿಳಿದ ಕಾಂಗ್ರೆಸ್-ಜೆಡಿಎಸ್ ಬಂಡಾಯ ಶಾಸಕರು ಗೋವಾ ಹೋಟೆಲ್‌ಗೆ ಶಿಫ್ಟ್ ಆಗಿದ್ದಾರೆ ಅನ್ನೋ ಮಾಹಿತಿ ಬಂದಿತ್ತಾದರು ನಂತರ ಅದೇ ಹೊಟೇಲ್ ನಲ್ಲಿ ಉಳಿದುಕೊಂಡರು. ಇಂದು ಸ್ಪೀಕರ್ ಎದುರು ಹಾಜರಾಗದೆ ಇರಲು ನಿರ್ಧಾರ ಮಾಡಿದ್ದಾರಂತೆ. ಹಾಗಿದ್ರೆ ಸರ್ಕಾರ ಉರುಳುತ್ತಾ..? ಉಳಿಯುತ್ತಾ ಅನ್ನೋ ಗೊಂದಲ ಮಾತ್ರ ಹಾಗೆ ಉಳಿದಿದೆ. ಇದ್ರ ನಡುವೆ ಸರ್ಕಾರ ಉಳಿಸಲು ನಾನಾ ಕಸರತ್ತು ನಡೆಯುತ್ತಿದೆ.

*ಸರ್ಕಾರ ಉಳಿಸಲು ಇರುವ ನಾನಾ ಮಾರ್ಗಗಳು*

ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿದ್ದು, ಎಲ್ಲಾ ಶಾಸಕರು ಕಡ್ಡಾಯ ಹಾಜರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಯಾರೆಲ್ಲಾ ಬಂಡಾಯ ನಾಯಕರು ಗೈರು ಹಾಜರಾಗ್ತಾರೋ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ.

ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಕ್ರಮಕ್ಕೆ ಸ್ಪೀಕರ್‌ಗೆ ಶಿಫಾರಸು ಮಾಡಿದ್ರೆ, ಸ್ಪೀಕರ್ ಒಪ್ಪಿಕೊಂಡು ಕ್ರಮ ಕೈಗೊಂಡ್ರೆ, ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಪಕ್ಷದ ಚಿಹ್ನೆಯಿಂದ ಆಯ್ಕೆಯಾಗಿರುವ ಶಾಸಕರು ಸರ್ಕಾರ ಉರುಳಿಸುವ ಸಲುವಾಗಿ ಹಣ ಪಡೆದು ರಾಜೀನಾಮೆ ಸಲ್ಲಿಸುವ ಮೂಲಕಬಲ ಪಕ್ಷವಿರೋಧಿ ಚಟುವಟಿಕೆ ಮಾಡ್ತಿದ್ದಾರೆ ಎಂದು ಸ್ಪೀಕರ್ ಹತ್ತಿರ ದೂರು ಸಲ್ಲಿಸಬಹುದು.

ಕುದುರು ವ್ಯಾಪಾರ ನಡೆಯುತ್ತಿದೆ. ಬಿಜೆಪಿ ನಾಯಕರು ನಮ್ಮ ಶಾದಕರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು.

ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡದಂತೆ ಒತ್ತಡ ಹೇರುವ ಮೂಲಕ ಎಲ್ಲಾ ಶಾಸಕರು ಅಧಿವೇಶನಕ್ಕೆ ಹಾಜರಾಗುವಂತೆ ಮಾಡಬಹುದು. ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದರೆ, ಶಾಸನ ಸಭೆಗೆ ಹಾಜರಾಗಲೇ ಬೇಕು. ಇಲ್ಲದಿದ್ದರೆ ಅನರ್ಹತೆ ತೂಗುಗತ್ತಿ ಪ್ರಭಾವ ಜೋರಾಗಲಿದೆ.

ಬಿಜೆಪಿ ಇಷ್ಟೆಲ್ಲಾ ರಾದ್ಧಾಂತ ಮಾಡಿದೆ ಅನ್ನೋ ಕಾರಣಕ್ಕೆ ಅಧಿವೇಶನಲ್ಲಿ ಸ್ವಯಂ ಪ್ರೇರಿತವಾಗಿ ವಿಶ್ವಾಸ ಮತ ಕೋರಬಹುದು. ಸದನದಲ್ಲಿ ಪಕ್ಷ ಹೇಳಿದಂತೆ ಶಾಸಕರು ಕೇಳಬೇಕು ಅನ್ನೋದನ್ನು ಕಾನೂನು ಹೇಳುತ್ತದೆ. ಒಂದು ವೇಳೆ ಉಲ್ಲಂಘಿಸಿದರೆ. ಮೊದಲು ನೀಡಿರುವ ದೂರಿನ ಪ್ರಕಾರ ಸ್ಪೀಕರ್ ಆದೇಶ ಹೊರಡಿಸಿದರೆ ಸರ್ಕಾರ ಪತನವಾದರೂ ಬಂಡಾಯ ಶಾಸಕರು ಅನರ್ಹರಾಗ್ತಾರೆ.

Leave a Reply