ಸಂಜೆಯೊಳಗೆ ವಿಚಾರಣೆ ನಡೆಸಿ: ಸ್ಪೀಕರ್ ಗೆ ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಜೆಡಿಎಸ್ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯ ವಿಚಾರಣೆಯನ್ನು ಇಂದು ಸಂಜೆಯೊಳಗೆ ನಡೆಸಿ, ರಾಜೀನಾಮೆ ಸ್ವೀಕರಿಸಿ ಅಥವಾ ತಿರಸ್ಕರಿಸುವ ನಿರ್ಣಯ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದೆ.

ಅತೃಪ್ತ ಶಾಸಕರ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ, ಈ ಸೂಚನೆ ನೀಡಿದೆ.

ನಾಳೆಯಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಪಕ್ಷಗಳು ವಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾನೂನು ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜೀನಾಮೆ ಕುರಿತ ತೀರ್ಮಾನ ಕೈಗೊಳ್ಳಿ ಎಂದು ಸೂಚಿಸಿದೆ.

ಇಲ್ಲಿ ಸುಪ್ರೀಂ ಕೋರ್ಟ್ ರಾಜೀನಾಮೆ ಅಂಗೀಕಾರ ಮಾಡಬೇಕು ಎಂದು ಸೂಚನೆ ನೀಡಿಲ್ಲ. ಹೀಗಾಗಿ ಸ್ಪೀಕರ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿಸಿದೆ.

ಇನ್ನು ಮತ್ತೊಂದು ಪ್ರಮುಖ ಅಂಶ ಎಂದರೆ, ಇಂದು ಸುಪ್ರೀಂ ಕೋರ್ಟ್ ನಿರ್ದೇಶನ ಕೇವಲ 10 ಶಾಸಕರ ರಾಜೀನಾಮೆಗೆ ಮಾತ್ರ ಸೀಮಿತವಾಗಿ. ಇನ್ನು ಉಳಿದ ರಾಜೀನಾಮೆ ನೀಡಿರುವ ಇತರೆ ಶಾಸಕರು ವಿಪ್ ವ್ಯಾಪ್ತಿಗೆ ಒಳಪಡುತ್ತಾರೆ. ಒಂದುವೇಳೆ ಈ 10 ಶಾಸಕರ ರಾಜೀನಾಮೆ ಅಂಗೀಕಾರವಾದರೂ ವಿಧಾನಸಭೆ ಸಂಖ್ಯಾಬಲ 214ಕ್ಕೆ ನಿಲ್ಲಲಿದ್ದು, ಮ್ಯಾಜಿಕ್ ನಂಬರ್ 108 ಆಗಲಿದೆ. ಆದರೆ ಸದ್ಯ ಪಕ್ಷೇತರ ಶಾಸಕರ ಬೆಂಬಲವಿದ್ದರು, ಬಿಜೆಪಿ ಬಲ 107ಕ್ಕೆ ಬಂದು ನಿಲ್ಲಲಿದೆ. ಆಗ ಮತ್ತೆ ಮೈತ್ರಿಗೆ ಮೇಲುಗೈ ಆಗುವ ಸಾಧ್ಯತೆ ಇದೆ.

Leave a Reply