ಡಿಕೆಶಿ ಸಂಧಾನಕ್ಕೆ ಒಪ್ಪಿದ ಎಂಟಿಬಿ ನಾಗರಾಜ್!?

ಡಿಜಿಟಲ್ ಕನ್ನಡ ಟೀಮ್:

ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ ನಿನ್ನೆ ಮಧ್ಯರಾತ್ರಿ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ರಾಜೀನಾಮೆ ವಾಪಸ್ ಪಡೆಯಲು ವಸತಿ ಸಚಿವ ಎಂಟಿಬಿ ನಾಗರಾಜ್ ಚಿಂತಿಸಿರುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ತೆರಳಿದ ಸಚಿವ ಡಿಕೆ ಶಿವಕುಮಾರ್ ಸುದೀರ್ಘ 3-4 ಗಂಟೆಗಳ ಕಾಲ ಮಾತುಕತೆ ನಡೆಸಿದರು.

ನಮ್ಮದು ಒಂದು ಕುಟುಂಬ. ಕುಟುಂಬದಲ್ಲಿ ಸಮಸ್ಯೆ ಬರುವುದು ಸಹಜ. ಅದನ್ನು ಬಗೆಹರಿಸಿಕೊಂಡು ಹೋಗೋಣ. ಇಷ್ಟು ದಿನ ಒಟ್ಟಿಗೆ ಇದ್ದೇವೆ. ಒಟ್ಟಿಗೆ ಸಾಯೋಣ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಿಧ್ಧವೀದ್ದೇವೆ ಎಂದು ಸಚಿವ ಡಿಕೆ ಶಿವಕುಮಾರ್ ಅವರು ನಾಗರಾಜ್ ಅವರಿಗೆ ಮನವೋಲಿಸಿದ್ದಾರೆ.

ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್ ನಾನು ರಾಜೀನಾಮೆ ಹಿಂಪಡೆಯುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದರು. ಈ ವೇಳೆ ಸಚಿವ ಡಿಕೆಶಿ ಜತೆಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ರಿಜ್ವಾನ್ ಹರ್ಷದ್ ಅವರು ಉಪಸ್ಥಿತರಿದ್ದರು.

ಈ ವೇಳೆ ನಾಗರಾಜ್ ಅವರನ್ನು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಾಗರಾಜ್ ಅವರ ಮನವೊಲಿಕೆ ಬೆನ್ನಲ್ಲೇ ಶಾಸಕ ಸುಧಾಕರ್ ಮನವೊಲಿಕೆಗೂ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ ಹಾಗೂ ಅತೃಪ್ತ ಶಾಸಕರ ಪಾಳಯದಲ್ಲಿ ಆತಂಕ ಮೂಡಿಸಿದೆ.

Leave a Reply