ಮೈತ್ರಿಗೆ ಅಗ್ನಿಪರೀಕ್ಷೆ: ಬಹುಮತ ಸಾಬೀತಿಗೆ ಮುಹೂರ್ತ ಫಿಕ್ಸ್!

ಡಿಜಿಟಲ್ ಕನ್ನಡ ಟೀಮ್:

ಮೈತ್ರಿ ಸರ್ಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬ ಅಗ್ನಿ ಪರೀಕ್ಷೆಯನ್ನು ನಡೆಸಲು ಗುರುವಾರ 11 ಗಂಟೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.

ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಅತಂತ್ರ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಇಂದೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದಿತ್ತು.

ಈ ವಿಚಾರವಾಗಿ ಸೋಮವಾರ ಸದನ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ದಿನಾಂಕ ನಿಗದಿ ಮಾಡುವಂತೆ ಕೋರಿದರು. ಆದರೆ ಬಿಜೆಪಿ ನಾಳೆಯೇ ಬಹುಮತ ಸಾಬೀತುಪಡಿಸಲು ಆಗ್ರಹಿಸಿದರು.

ಎರಡು ಕಡೆಯ ಮನವಿ ಆಲಿಸಿದ ಸ್ಪೀಕರ್ ಬುಧವಾರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದ ತೀರ್ಪು ನೋಡಿಕೊಂಡು ಮುಂದಿನ ಹೆಜ್ಜೆ ಇಡೋಣ ಎಂದು ಸಲಹೆ ನೀಡಿದರು. ಅಂತಿಮವಾಗಿ ಗುರುವಾರ ಮೈತ್ರಿ ಸರ್ಕಾರ ತನ್ನ ಬಹುಮತ ಸಾಬೀತುಪಡಿಸಲು ಸಮಯ ನಿಗದಿಪಡಿಸಿದರು.

Leave a Reply