ಅತೃಪ್ತರು vs ಸ್ಪೀಕರ್: ನಾಳೆ ಸುಪ್ರೀಂ ಅಂತಿಮ ತೀರ್ಪು!

ಡಿಜಿಟಲ್ ಕನ್ನಡ ಟೀಮ್:

ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಉದ್ದೇಶಪೂರ್ವಕವಾಗಿ ಅಂಗೀಕರಿಸಿಲ್ಲ ಎಂದು ಆರೋಪಿಸಿ ಸಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ, ಮಂಗಳವಾರ ತನ್ನ ವಿಚಾರಣೆ ಮುಂದುವರಿಸಿತು. ಇಂದು ನ್ಯಾಯಾಲಯದಲ್ಲಿ ಅತೃಪ್ತ ಶಾಸಕರು, ಸ್ಪೀಕರ್, ಸಿಎಂ ಪರ ಹಾಗೂ ಯೂತ್ ಕಾಂಗ್ರೆಸ್ ಪರ ವಕೀಲರು ಸುದೀರ್ಘವಾಗಿ ತಮ್ಮ ವಾದ ಮಂಡಿಸಿದರು. ಬೆಳಗ್ಗೆ 10.30ಕ್ಕೆ ಆರಂಭವಾದ ವಿಚಾರಣೆ ಮಧ್ಯಾಹ್ನ ಊಟದ ವಿರಾಮ ಅರ್ಧ ಗಂಟೆ ಹೊರತಾಗಿ 3.30ರ ವರೆಗೂ ನಡೆಯಿತು.

ಮ್ಯಾರಥಾನ್ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನಾಳೆ ಬೆಳಿಗ್ಗೆ 10.30ಕ್ಕೆ ಪ್ರಕಟಿಸುವುದಾಗಿ ತಿಳಿಸಿತು. ಹೀಗಾಗಿ ಇಂದೇ ಅತೃಪ್ತರು, ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

Leave a Reply