ನೀ ಕೊಡೆ ನಾ ಬಿಡೆ! ಅಧಿಕಾರಕ್ಕಾಗಿ ಪಟ್ಟು ಹಿಡಿದ ನಾಯಕರು

ಡಿಜಿಟಲ್ ಕನ್ನಡ ಟೀಮ್:

ಬಹು ನಿರೀಕ್ಷಿತ ವಿಶ್ವಾಸಮತ ಯಾಚನೆ ಮೇಲೆ ಗುರುವಾರ ವಿಧಾನಸಭೆಯಲ್ಲಿ ಚರ್ಚೆ ಆರಂಭವಾಯಿತಾದರೂ ನಂತರ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ತಮ್ಮದೇ ತಂತ್ರಗಾರಿಕೆ ಪ್ರಯೋಗಿಸಿ ದಿನದ ಕಲಾಪದಲ್ಲಿ ಗದ್ದಲ ಮಾಡಿ ಕಾಲ ಕಳೆದರು.

ಸರ್ಕಾರವನ್ನು ಬೀಳಿಸಿಯೇ ತೀರುತ್ತೇವೆ ಎಂದು ಪಣ ತೊಟ್ಟು ಬಂದಿದ್ದ ಬಿಜೆಪಿ ನಾಯಕರಿಗೆ ನಿರಾಸೆಯಾಗಿ ಇಂದು ವಿಧಾನಸೌಧದಲ್ಲೇ ಉಳಿದು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದು, ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಇಂದೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಇನ್ನು ಶೆಡ್ಯೂಲ್ 10 ವಿಚಾರವಾಗಿ ನಾಳೆ ಸ್ಪೀಕರ್ ರಮೇಶ್ ಕುಮಾರ್ ಅವರು ರೂಲಿಂಗ್ ಹೊರಡಿಸಿದ್ದು, ಅದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಂದಿನ ಕಲಾಪದಲ್ಲಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಶಾಸಕಾಂಗ ಪಕ್ಷದ ನಾಯಕರು ಹಾಗೂ ಸದಸ್ಯರ ಹಕ್ಕಿಗೆ ದಕ್ಕೆಯಾಗಿದ್ದು, ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗೋವರೆಗೆ ವಿಶ್ವಾಸಮತ ಯಾಚನೆ ಮುಂದೂಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದರೆ. ಇಂದು ಸಿಎಂ ಅವರ ಸ್ವಯಂ ಪ್ರೇರಣೆ ನಿರ್ಧಾರದಂತೆ ಸದನದ ಉದ್ದೇಶದಂತೆ ಇಂದೇ ವಿಶ್ವಾಸಮತ ಯಾಚನೆ ಮಾಡಿ ಮತಕ್ಕೆ ಹಾಕಬೇಕು ಎಂದು ಆಗ್ರಹಿಸಿದರು.

Leave a Reply