ಸರ್ಕಾರ ಉಳಿಸಲು ಸಿದ್ದರಾಮಯ್ಯ ಕ್ರಿಯಾಲೋಪ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಯುತ್ತಾ? ಉರುಳುತ್ತಾ? ಎಂಬ ತೀವ್ರ ಕುತೂಹಲದಿಂದ ಗುರುವಾರ ವಿಧಾನಸಭೆಯಲ್ಲಿನ ವಿಶ್ವಾಸಮತದ ಮೇಲೆ ಇಡೀ ದೇಶದ ಗಮನ ನೆಟ್ಟಿತ್ತು. ಆದರೆ ವಿಶ್ವಾಸಮತ ಯಾಚನೆ ಕುರಿತ ಚರ್ಚೆ ಆರಂಭವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ವಿಚಾರ ಪ್ರಸ್ತಾಪಿಸಿದರು. ಆಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕ್ರಿಯಾಲೋಪದ ವಿಚಾರ ಎತ್ತಿ. ವಿಪ್ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟನೆ ಸಿಗುವವರೆಗೂ ಈ ವಿಶ್ವಾಸಮತ ಯಾಚನೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

ಸದನಕ್ಕೆ ರಾಜೀನಾಮೆ ನೀಡಿರುವ ಶಾಸಕರು ಹಾಜರಾಗಲೇಬೇಕು ಎಂದು ಒತ್ತಡ ಹೇರುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಸಂವಿಧಾನದ 10ನೇ ಶೆಡ್ಯೂಲ್ ನಲ್ಲಿ ಶಾಸಕಾಂಗ ಪಕ್ಷದ ನಾಯಕನಿಗೆ ನೀಡಿರುವ ಹಕ್ಕನ್ನು ಉಲ್ಲಂಘನೆ ಮಾಡಿದಂತಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಲೇ ಪ್ರಭಾವಿತರಾಗಿ ಅತೃಪ್ತ ಶಾಸಕರು ಹಾಜರಾಗದೇ ಇರಬಹುದು. ಆಗ ನಾನು ನನ್ನ ಅಧಿಕಾರ ಬಳಸಿ ವಿಪ್ ಬಳಸಬೇಕು ಅವಾ ಬೇಡವೇ ಎಂಬ ಗೊಂದಲ ಮೂಡುತ್ತದೆ. ಈ ವಿಚಾರವಾಗಿ ನಾವು ಪುನರ್ ಮನವಿ ಮೂಲಕ ಸ್ಪಷ್ಟನೆ ಪಡೆಯಬಹುದು. ಆದರೆ ಈ ಗೊಂದಲದಲ್ಲಿ ವಿಶ್ವಾಸಮತ ಯಾಚನೆಯನ್ನು ಮತಕ್ಕೆ ಪಾಕಿದರೆ ಕಾಂಗ್ರೆಸ್ ಪಕ್ಷ ಹಾಗೂ ಮೈತ್ರಿ ಸರ್ಕಾರಕ್ಕೆ ನಷ್ಯವಾಗುತ್ತದೆ, ಅನ್ಯಾಯವಾಗುತ್ತದೆ ಎಂದು ಸಿದ್ದರಾಮಯ್ಯ ವಾದ ಮಂಡಿಸಿದರು.

ಚರ್ಚೆ ವೇಳೆ ಬಿಜೆಪಿ ನಾಯಕರಾದ ಮಾಧುಸ್ವಾಮಿ, ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಕ್ರಿಯಾಲೋಪ ಪ್ರಸ್ತಾವನೆಗೆ ಅವಕಾಶ ನೀಡಬಾರದು ಎಂದು ಸ್ಪೀಕರ್ ಗೆ ಮನವಿ ಮಾಡಿದರು. ಈ ವೇಳೆ ಒಂದು ಅಂಶವನ್ನು ತಿಳಿಸಿದ ಸ್ಪೀಕರ್ ರಮೇಶ್ ಕುಮಾರ್, ಸುಪ್ರೀಂ ಕೋರ್ಟ್ ನ ವಿಚಾರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಪ್ರತಿವಾದಿಯಾಗಿಲ್ಲ. ಬದಲಿಗೆ ಸ್ಪೀಕರ್ ಆಗಿ ನಾನು ಪ್ರತಿವಾದಿಯಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಯಾರು ಪಾಲಿಸಬೇಕು. ಶಾಸಕರಿಗೆ ಒತ್ತಡ ಹೋರಬಾರದು ಎಂಬ ತೀರ್ಪನ್ನು ಶಾಸಕಾಂಗ ಪಕ್ಷದ ನಾಯಕರು ಪಾಲಿಸಬೇಕೆ ಅಥವಾ ಸ್ಪೀಕರ್ ಆದ ನಾನು ಪಾಲಿಸಬೇಕೆ ಎಂಬುದು ನನಗೆ ಅರ್ತವಾಗಿಲ್ಲ. ಹೀಗಾಗಿ ನಾನು ಏನು ಮಾಡಬೇಕು ಎಂದು ಸದನವೇ ನನಗೆ ತಿಳಿಸಬೇಕು ಎಂದರು. ನಂತರ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.

Leave a Reply