ನಮ್ಮ ಶಾಸಕರಿಗೆ ರಕ್ಷಣೆ ಕೊಡಿ: ಸ್ಪೀಕರ್ ಮುಂದೆ ಡಿಕೆಶಿ ಮನವಿ ಮಾಡಿದ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ನಮ್ಮ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅವರು ಬಲವಂತವಾಗಿ ಕರೆದೊಯ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ನಮ್ಮ ಶಾಸಕರು ಅಪಾಯದಲ್ಲಿದ್ದು ಅವರನ್ನು ರಕ್ಷಿಸಿ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.

ಗುರುವಾರ ಭೋಜನ ವಿರಾಮ ನಂತರ ಕಲಾಪ ಆರಂಭವಾದಾಗ ಮೊದಲು ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ‘ನಿನ್ನೆ ನಮ್ಮ ಜತೆ ರೆಸಾರ್ಟ್ ನಲ್ಲಿ ಇದ್ದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿ ಅವರು ಬಲವಂತವಾಗಿ ಕರೆದೊಯ್ದು ಆಸ್ಪತ್ರೆಯಲ್ಲಿ ದಾಖಲಾಗಿರುವಂತೆ ಫೋಟೋ ಹರಿಬಿಟ್ಟಿದ್ದಾರೆ. ನಮ್ಮ ಶಾಸಕರು ಅಪಾಯದಲ್ಲಿದ್ದು, ಸಭಾಧ್ಯಕ್ಷರು ತಮ್ಮ ಅಧಿಕಾರ ಬಳಸಿ ಶಾಸಕರ ರಕ್ಷಣೆ ಮಾಡಬೇಕು’ ಎಂದು ಮನವಿ ಮಾಡಿದರು.

ಈ ವೇಳೆ ಸಚಿವರು ಶ್ರೀಮಂತ ಪಾಟೀಲರು ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿತ್ರ, ಶ್ರೀಮಂತ ಪಾಟೀಲರು ಬಿಜೆಪಿ ನಾಯಕರ ಜತೆ ನಿನ್ನೆ ರಾತ್ರಿ ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಮಾಡಿ, ಬೆಳಗಿನ ಜಾವ ಮುಂಬೈಗೆ ತೆರಲಿರುವ ಟಿಕೆಟ್ ವಿವರಣೆಯ ದಾಖಲೆ ಬಿಡುಗಡೆ ಮಾಡಿದರು.

Leave a Reply