ರಾಜ್ಯಪಾಲರಿಂದ ಡೆಡ್ ಲೈನ್ ಮೇಲೆ ಡೆಡ್ ಲೈನ್ ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ವಿಶ್ವಾಸಮತ ಯಾಚನೆಗೆ ಗಡುವು ಮೇಲೆ ಗಡುವು ನೀಡುತ್ತಲೇ ಇದ್ದಾರೆ. ಈಗ ಮೂರನೇ ಬಾರಿ ಗಡುವು ನೀಡಿರುವ ರಾಜ್ಯಪಾಲರು ಇಂದು ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಯಾಚನೆ ಮುಗಿಸಿ ಎಂದು ಹೇಳಿದ್ದಾರೆ.

ಆದರೆ ಸರ್ಕಾರ ಮಾತ್ರ ಈಗಾಗಲೇ ವಿಶ್ವಾಸಮತ ಯಾಚನೆ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಇದು ಸದನದ ಸ್ವತ್ತು. ಇದರಲ್ಲಿ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಹೇಳುತ್ತಿದೆ.

ಇಷ್ಟೆಲ್ಲಾ ಆದರೂ ರಾಜ್ಯಪಾಲರು ಮಾತ್ರ ಯಾಕೆ ಗಡುವು ನೀಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ ಸಿಗಬೇಕಾದರೆ ಇಂದು ಬೆಳಗ್ಗೆ ಸಚಿವ ಡಿಕೆ ಶಿವಕುಮಾರ್ ಅವರು ವಿಧಾನಸೌಧ ಪ್ರವೇಶಿಸುವಾಗ ಮಾಧ್ಯಮಗಳ ಮುಂದೆ ಹೇಳಿದ ಮಾತನ್ನು ಗಮನಿಸಬೇಕು.

ರಾಜ್ಯಪಾಲರ ಗಡುವು ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹಂತ ಹಂತವಾಗಿ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದರು. ಸದ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಸರ್ಕಾರಕ್ಕೆ ಗಡುವು ಮೇಲೆ ಗಡುವು ನೀಡಿ ಸರ್ಕಾರ ಆದರ ಉಲ್ಲಂಘನೆ ಮಾಡಿದರೆ ನಂತರ ಅದನ್ನೇ ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಅಮಾನತ್ತು ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ವಾತಾವರಣ ನಿರ್ಮಾಣ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

Leave a Reply