ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಎಂ ‘ಜಿ10’ ಸ್ವಿಚ್!

ಡಿಜಿಟಲ್ ಕನ್ನಡ ಟೀಮ್:

ಭಾರತದ ನಂಬರ್ ಒನ್ ಕಂಪನಿ ಅಷ್ಟೇ ಅಲ್ಲ ಅತ್ಯುತ್ತಮ ಗುಣಮಟ್ಟದ ಉತ್ಪನ್ನ ಕಂಪನಿ ಜಿಎಂ ಸ್ವಿಚ್ ಈಗ ವಿಶ್ವದ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಹೊಸದಾಗಿ ಜಿ10 ಸರಣಿ ಸ್ವಿಚ್ ಗಳು ಗ್ರಾಹಕರ ಮನ ಗೆಲ್ಲಲಿದೆ ಎಂದು ಕಂಪನಿ ರಾಯಭಾರಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ಪ್ರತಿಷ್ಠಿತ ಹೊಟೇಲ್ ನಲ್ಲಿ ನೂತನ ಜಿ10 ಸರಣಿಯ ಸ್ವಿಚ್ ಉತ್ಪನ್ನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿತರಕರು ಈ ಉತ್ಪನ್ನದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುನೀಲ್ ಶೆಟ್ಟಿ, ಕಂಪನಿಯ ಮುಖ್ಯಸ್ಥ ರಮೇಶ್ ಜೈನ್, ವ್ಯವಸ್ಥಾಪಕ ನಿರ್ದೇಶಕ ಜಯಂತ್ ಜೈನ್ ಮತ್ತು ಕುಮಾರಪಾಲ್ , ನಿರ್ದೇಶಕ ಹಾಗೂ ಕರ್ನಾಟಕ ವಿತರಣೆ ವಿಭಾಗ ಮುಖ್ಯಸ್ಥರಾದ ಜಯಪ್ರಕಾಶ್ ಅವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸುನೀಲ್ ಶೆಟ್ಟಿ, ಜಿಎಂ ಸ್ವಿಚ್ ಕಂಪನಿ ಉತ್ಪನ್ನಗಳು ಕೇವಲ ವಿನ್ಯಾಸಕ್ಕೆ ಮಾತ್ರವಲ್ಲ ಗುಣಮಟ್ಟಕ್ಕೂ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಜಿಎಂ ಸ್ವಿಚಸ್ ಕಂಪನಿ ಇತರೆ ಕಂಪನಿಗಳಿಗಿಂತ ಉನ್ನತ ಮಟ್ಟದಲ್ಲಿ ಸ್ಥಾನ ಪಡೆದಿದೆ ಎಂದರು.

ಕಳೆದು 2 ವರ್ಷಗಳಿಂದ ನಾನು ಜಿಎಂ ಸ್ವಿಚಸ್ ಜೊತೆ ಸಹಯೋಗ ಹೊಂದಿದ್ದು, ನಾನು ಇಲ್ಲಿ ರಾಯಭಾರಿಯಾಗಿರುವುದಕ್ಕಿಂತ ಕುಟುಂಬ ಸದಸ್ಯನಾಗಿದ್ದೇನೆ. ಜಿಎಂ ಸ್ವಿಚಸ್ ಬೆಂಗಳೂರಿನಲ್ಲೇ ಹುಟ್ಟಿದ ಕಂಪನಿ. ಹೀಗಾಗಿ ಇದರ ಜತೆಗಿನ ಸಹಯೋಗಕ್ಕೆ ಬೇರೆ ಕಾರಣವೇ ಬೇಕಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಜೈನ್, ಕಂಪನಿಯ ನೂತನ ಉತ್ಪನ್ನದ ವಿಶೇಷತೆಗಳನ್ನು ವಿವರಿಸಿದರು. ‘ಹೊಸದಾಗಿ ಬಿಡುಗಡೆ ಮಾಡಿರುವ ಜಿ10 ಪ್ರಪಂಚದ ಅತಿ ತೆಳುವಾದ ಸ್ವಿಚ್ ಗಳಾಗಿವೆ. ಹೊಸ ವಿನ್ಯಾಸ, ಕಡಿಮೆ ಬೆಲೆ, ಅತ್ಯುತ್ತಮ ಗುಣಮಟ್ಟ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಜಿ10 ಸರಣಿಗಳನ್ನು ತಯಾರಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ವಿನ್ಯಾಸ ಹಾಗೂ ಗುಣಮಟ್ಟದ ಪರೀಕ್ಷೆ ನಡೆಸಿ ಈಗ ಮಾರುಕಟ್ಟೆಗೆ ಬಂದಿದೆ.

ಜೀವನವನ್ನು ಸರಳಗೊಳಿಸುವ ಉದ್ದೇಶ ಜಿಎಂ ಕಂಪನಿಯದ್ದು. ಹೀಗಾಗಿ ಸ್ವಿಚ್ ಮಾತ್ರವಲ್ಲದೆ ಈಗ ಗೃಹ ಸಾಮಾಗ್ರಿಗಳ ಉತ್ಪನ್ನಗಳನ್ನು ಕಂಪನಿ ತಯಾರಿಸುತ್ತದೆ. ಮನೆಯೊಳಗೆ ಗೋಡೆ ಹಾಗೂ ಒಳಾಂಗಣದ ಸೌಂದರ್ಯ ಹೆಚ್ಚಿಸಲು ಮನಮೋಹಕ ವಿನ್ಯಾಸಗಳಲ್ಲಿ ಜಿ10 ಸರಣಿ ಸ್ವಿಚ್ ಗಳನ್ನು ಪರಿಚಯಿಸುತ್ತಿದ್ದೇವೆ ಎಂದರು.

ದೇಶದ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿರುವ ಜಿಎಂ ಹೊರ ದೇಶಗಳಾದ ದುಬೈ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಯೂರೋಪಿನ ಕೆಲ ದೇಶಗಳಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದೆ ಎಂದು ಮಾಹಿತಿ ಕೊಟ್ಟರು.

ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ನಿರಂತರವಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳ ವಿನ್ಯಾಸ ಹಾಗೂ ಗುಣಮಟ್ಟವನ್ನು ರೂಪಿಸುತ್ತಿದೆ. ಇದೇ ಕಾರಣಕ್ಕೆ ಕಂಪನಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

Leave a Reply