ಇಷ್ಟು ದಿನ ಪಾಕಿಸ್ತಾನ ಸರ್ಕಾರ ಬುರುಡೆ ಬಿಡುತ್ತಿತ್ತು! ತಪ್ಪೊಪ್ಪಿಕೊಂಡ ಪ್ರಧಾನಿ ಇಮ್ರಾನ್ ಖಾನ್!

ಡಿಜಿಟಲ್ ಕನ್ನಡ ಟೀಮ್:

‘ಭಯೋತ್ಪಾದನೆ ವಿಚಾರದಲ್ಲಿ ಕಳೆದ 15 ವರ್ಷಗಳಿಂದ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ರಾಜಕೀಯ ಪಕ್ಷಗಳು ಅಮೆರಿಕಕ್ಕೆ ಸುಳ್ಳು ಹೇಳುತ್ತಲೇ ಬಂದಿವೆ. ಸದ್ಯ ಪಾಕಿಸ್ತಾನದಲ್ಲಿ ಸುಮಾರು 40 ಉಗ್ರಗಾಮಿ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ…’ ಇದು ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಪ್ಪೊಪ್ಪಿಗೆ.

ಹೌದು, ಕ್ಯಾಪಿಟಲ್ ಹಿಲ್ ರಿಸೆಪ್ಷನ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಇಮ್ರಾನ್ ಖಾನ್, ‘ಭಯೋತ್ಪಾದನೆ ವಿರುದ್ಧ ಅಮೆರಿಕದ ಹೋರಾಟವನ್ನು ನಾವು ನಡೆಸುತ್ತಿದ್ದೇವೆ. 9/11 ಭಯೋತ್ಪಾದಕ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ ಖೈದಾ ಸಂಘಟನೆ ಅಫ್ಘಾನಿಸ್ತಾನದಲ್ಲಿತ್ತು. ಪಾಕಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದಕರು ಇಲ್ಲ. ನಾವು ಅಮೆರಿಕದ ಜತೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದೆವು. ದುರಾದೃಷ್ಟ ಪರಿಸ್ಥಿತಿ ಬದಲಾದಾಗ ನಮ್ಮ ಹಿಂದಿನ ಸರ್ಕಾರಗಳು ದೇಶದಲ್ಲಿನ ಭಯೋತ್ಪಾದನೆ ವಿಚಾರವಾಗಿ ಅಮೆರಿಕಕ್ಕೆ ಸತ್ಯಾಂಶವನ್ನು ತಿಳಿಸಲಿಲ್ಲ’ ಎಂದರು.

‘ಸದ್ಯ ಪಾಕಿಸ್ತಾನದಲ್ಲಿ 40 ವಿವಿಧ ಭಯೋತ್ಪಾದಕ ಸಂಘಟನೆಗಳಿವೆ. ಸದ್ಯ ಪಾಕಿಸ್ತಾನದಲ್ಲಿ ನನ್ನಂತಹವರು ತಮ್ಮನ್ನು ತಾವು ರಕ್ಷಿಸಿಕೊಂಡರೆ ಸಾಕು ಎಂಬ ಸ್ಥಿತಿಯಲ್ಲಿದ್ದೇವೆ. ಪಾಕಿಸ್ತಾನ ತನ್ನ ಉಳಿವಿಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಅಮೆರಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಮ್ಮಿಂದ ಹೆಚ್ಚಿನದ್ದನ್ನು ನಿರೀಕ್ಷಿಸುತ್ತಿದೆ’ ಎಂದಿದ್ದಾರೆ.

Leave a Reply