ಮುಖ್ಯಮಂತ್ರಿ ಹೊಸಬರಿರಬಹುದು ಆದರೆ ಅವರ ಮುಂದಿರುವ ಸವಾಲುಗಳು ಹೊಸತಲ್ಲ!

ಡಿಜಿಟಲ್ ಕನ್ನಡ ಟೀಮ್:

ಈ ಹಿಂದೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್ ಯಡಿಯೂರಪ್ಪನವರು ಶುಕ್ರವಾರ ನಾಲ್ಕನೇ ಬಾರಿಗೆ ರಾಜ್ಯದ ಸಿಎಂ ಆಗಿ ಅಧಿಕಾರ ಹಿಡಿದಿದ್ದಾರೆ. ಈ ಹಿಂದೆ ಮೂರು ಬಾರಿ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಪೂರ್ಣ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿಲ್ಲ. ಈ ಬಾರಿಯಾದರೂ ಅದು ಸಾಕಾರಗೊಳ್ಳುವುದೇ ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಕಾರಣ, ನೂತನ ಸಿಎಂ ಮುಂದೆ ಇರುವ ಹಳೇ ಸವಾಲುಗಳು…

ಯಡಿಯೂರಪ್ಪನವರು ಭವಿಷ್ಯ, ಶಾಸ್ತ್ರದ ಮೇಲೆ ನಂಬಿಕೆ ಇಟ್ಟಿರುವವರು 2008ರಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ತಮ್ಮ ಹೆಸರಿನಲ್ಲಿದ್ದ ಎರಡು D ಅಕ್ಷರಗಳಲ್ಲಿ ಒಂದನ್ನು ತೆಗೆದುಹಾಕಿದ್ದರು. ಆದರೆ ಈಗ ಮತ್ತೆ ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿರಲು ಮೊದಲಿನಂತೆ ತಮ್ಮ ಹೆಸರಿನಲ್ಲಿ ಎರಡು D ಅಕ್ಷರಗಳನ್ನು ಸೇರಿಸಿಕೊಂಡಿದ್ದಾರೆ.

2007ರಲ್ಲಿ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪನವರು 2007, ನ.12ರಿಂದ 19ರವರೆಗೆ ಅಂದರೆ 8 ದಿನಗಳ ಕಾಲ ಸಿಎಂ ಆಗಿ ಅಧಿಕಾರ ಹೊಂದಿದ್ದರು. ಇನ್ನು 2008 ಮೇ.30ರಂದು ಎರಡನೇ ಬಾರಿಗೆ ಸಿಎಂ ಆದ ಬಿಎಸ್ ವೈ 2011, ಜೂನ್ 31ರವರೆಗೆ ಅಧಿಕಾರ ನಡೆಸಿ ಭ್ರಷ್ಟಾಚಾರ ಆರೋಪದ ಮೇಲೆ ರಾಜೀನಾಮೆ ನೀಡಿದರು. 2018ರಲ್ಲಿ ಮೂರನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಎರಡು ದಿನಕ್ಕೆ ಅಧಿಕಾರ ಕಳೆದುಕೊಂಡಿದ್ದರು. ಈಗ ಬಿಎಸ್ ವೈ ಅವರ ಮುಂದೆ ಹಳೇ ಸವಾಲುಗಳಿದ್ದು, ಈ ಸವಾಲುಗಳನ್ನು ಮೆಟ್ಟಿ ನಿಂತು ಅವರು ಪೂರ್ಣ ಅವಧಿಯಲ್ಲಿ ಅಧಿಕಾರವನ್ನು ನಡೆಸುವರೆ ಎಂಬ ಪ್ರಶ್ನೆ ಮೂಡಿದೆ.

ಸೋಮವಾರ ಬಿಎಸ್ ವೈ ಬಹುಮತ ಸಾಬೀತುಪಡಿಸಬೇಕಾಗಿದ್ದು, ಕಳೆದ ವರ್ಷವೂ ಯಡಿಯೂರಪ್ಪನವರು ಇದೇ ಪರೀಕ್ಷೆಯಲ್ಲಿ ಸೋತು ಅಧಿಕಾರದಿಂದ ಕೆಳಗಿಳಿದಿದ್ದರು. ಹೀಗಾಗಿ ಸದ್ಯ ಬಹುಮತ ಸಾಬೀತುಪಡಿಸುವುದು ಬಿಎಸ್ ವೈ ಅವರ ಮುಂದಿರುವ ಸಾವಾಲುಗಳಲ್ಲಿ ಒಂದು.

ಒಂದು ವೇಳೆ ಯಡಿಯೂರಪ್ಪನವರು ಬಹುಮತ ಸಾಬೀತು ಮಾಡಿ ಸರ್ಕಾರ ರಚನೆ ಮಾಡಿದರೆ ಅವರಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಲಿದೆ. ಅದುವೇ ಸಚಿವ ಸಂಪುಟ ರಚನೆ. ಹೌದು, ಸದ್ಯ ಬಿಜೆಪಿಯ 105 ಶಾಸಕರ ಪೈಕಿ ಸುಮಾರು 50 ಹೆಚ್ಚು ಶಾಸಕರು ಹಿರಿಯರಾಗಿದ್ದು, ಸಚಿವ ಸಂಪುಟಕ್ಕೆ ಆಯ್ಕೆಯಾಗುವ ಅರ್ಹತೆ ಹೊಂದಿದ್ದಾರೆ. ಪಕ್ಷದೊಳಗೆ ಸಚಿವ ಸಂಪುಟ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯಲಿದ್ದು, ಸಚಿವ ಸ್ಥಾನ ಸಿಗದಿದ್ದವರನ್ನು ಸಂಬಾಳಿಸುವುದು ಬಿಎಸ್ ವೈ ಮುಂದಿರುವ ದೊಡ್ಡ ಟಾಸ್ಕ್.

ಇನ್ನು ಪಕ್ಷದೊಳಗಿನವರ ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ರೈಬಲ್ ಶಾಸಕರಿಗೆ ನೀಡಿರುವ ವಚನವನ್ನು ಉಳಿಸಿಕೊಳ್ಳಲು ಮಂತ್ರಿಗಿರಿ ಹೇಗೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಪಕ್ಷದೊಳಗೆ ಸಚಿವ ಸ್ಥಾನಕ್ಕೆ ಇನ್ನಿಲ್ಲದ ಸ್ಪರ್ಧೆ ಇರೋವಾಗ ಹೊರಗಿನವರಿಗೆ ಸಚಿವ ಸ್ಥಾನ ಎಲ್ಲಿಂದ ಕೊಡ್ತಾರೆ. ಒಂದು ವೇಳೆ ಕೊಡದಿದ್ದರೆ ಅವರ ಬಂಡಯವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಕೊಟ್ಟರೆ ಪಕ್ಷದೊಳಗಿನ ಶಾಸಕರ ಬಂಡಾಯ ಎದುರಿಸಬೇಕಾಗುತ್ತದೆ. ಆಗ ಬಿಎಸ್ ವೈ 2008ರಲ್ಲಿ ಎದುರಾದ ಬಂಡಾಯದ ಬಿಸಿ ಮತ್ತೆ ತಟ್ಟುವ ಸಾಧ್ಯತೆ ಇದೆ.

Leave a Reply