ಕೆಜಿಎಫ್ ಅಂಗಳದಿಂದ ಅಭಿಮಾನಿಗಳಿಗೆ ಅಧೀರನ ದರ್ಶನ!

ಡಿಜಿಟಲ್ ಕನ್ನಡ ಟೀಮ್:

ಇಡಿ ವಿಶ್ವವನ್ನೇ ತನ್ನತ್ತ ತಿರುಗುವಂತೆ ಮಾಡಿದ್ದು ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1. ಪ್ರಚಂಡ ಯಶಸ್ಸಿನ ಬೆನ್ನಲ್ಲೇ ಈಗ ಚಾಪ್ಟರ್ 2 ತಯಾರಿ ನಡೆಯುತ್ತಿದ್ದು, ಅಭಿಮಾನಿಗಳನ್ನು ಕಾಡಿದ್ದ ಅಧೀರ ಯಾರು ಎಂಬ ಪ್ರಶ್ನೆಗೆ ಚಿತ್ರತಂಡ ಉತ್ತರ ನೀಡಿದೆ. ಸೋಮವಾರ ಅಧೀರನ ಪಾತ್ರಧಾರಿ ಸಂಜಯ್ ದತ್ ಅವರ ಮೊದಲ ಲುಕ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಅಧೀರನಾಗಿ ಸಂಜು ಬಾಬಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತಿತ್ತು. ಆದರೆ ಅಧೀರನ ದರ್ಶನ ಯಾವಾಗ? ಅಧೀರನ ಖಡಕ್ ಲುಕ್ ಹೇಗಿರತ್ತೆ ಎಂಬ ನಿರೀಕ್ಷೆ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಈಗ ಚಿತ್ರತಂಡ ಇವೆಲ್ಲದಕ್ಕೂ ಉತ್ತರ ನೀಡಿದ್ದು ಈ ಪೋಸ್ಟರ್ ಬಿಡುಗಡೆ ಮಾಡಿದೆ.

Leave a Reply