ಟಿಪ್ಪು ಜಯಂತಿ ರದ್ದು! ಬಿಎಸ್ ವೈ ಬಾಯಲ್ಲಿ ಬೆಣ್ಣೆ… ಬಗಲಲ್ಲಿ ದೊಣ್ಣೆ..!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿದೆ.

ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಸ್ಥಾಪಿಸಿದ್ದ ಯಡಿಯೂರಪ್ಪ ಟಿಪ್ಪು ಜಯಂತಿ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆ ಬಳಿಕ ಸಿದ್ದರಾಮಯ್ಯ ಸಿಎಂ ಆದ ಮೇಲೆ ಟಿಪ್ಪು ಜಯಂತಿ ವಿವಾದದ ಕೇಂದ್ರ ಬಿಂದು ಆಗಿತ್ತು. ಇದೀಗ ನೂತನ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಸಿಎಂ ಯಡಿಯೂರಪ್ಪ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದು ಮಾಡಿ ಆದೇಶ ಮಾಡಿದೆ. ಕೆಲವು ಭಾಗದಲ್ಲಿ ಟಿಪ್ಪು ಜಯಂತಿ ಆಚರಣೆಯಿಂದ ಗಲಾಟೆ ನಡೆಯುತ್ತಿತ್ತು. ಅಲ್ಲಿನ ಶಾಸಕರ ಮನವಿ ಮೇರೆಗೆ ಟಿಪ್ಪು ಜಯಂತಿ ರದ್ದು ಮಾಡಲಾಯಿತು ಎಂದು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಿದೆ.

ಯಡಿಯೂರಪ್ಪ ಸಿಎಂ ಆದ ಬಳಿಕ ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿ ದ್ವೇಷದ ರಾಜಕಾರಣ ಮಾಡ್ತಿದೆ ಅಂತಾ ಕಾಂಗ್ರೆಸ್ ಟೀಕಿಸಿದೆ. ಇನ್ನು ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರ ಹಾಕಿದ್ದು, ಅದಕ್ಕೆ ಕಾರಣ ಹೀಗಿದೆ…

ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವ ಕೆಲವೇ ಗಂಟೆಗಳು ಬಾಕಿ ಇದ್ದ ಹಾಗೆ ಒಂದು ಆದೇಶ ಹೊರಡಿಸಿದ್ರು. ಅದೇನೆಂದರೆ ಜುಲೈ ತಿಂಗಳಲ್ಲಿ ಹಿಂದಿನ ಸರ್ಕಾರ ಮಾಡಿರುವ ಆದೇಶಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸೂಚಿಸಿದ್ದರು.

ಅದಾದ ಬಳಿಕ ನಿಗಮ ಮಂಡಳಿ ಹಾಗೂ ಅಕಾಡೆಮಿ ಗಳ ಅಧ್ಯಕ್ಷರು ಸದಸ್ಯರನ್ನು ವಜಾ ಮಾಡಿ ಸರ್ಕಾರವೇ ಆದೇಶ ಹೊರಡಿಸಿತ್ತು. ಆ ಬಳಿಕ ಕೆಎಂಎಫ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಯಾಕಂದ್ರೆ ಈಗಾಗಲೇ ಗೆಲುವು ಸಾಧಿಸಿರುವ ನಿರ್ದೇಶಕರು ಕಾಂಗ್ರೆಸ್ ಹಾಗೂ ಜೆಡಿಎಸ್‌ ಬೆಂಬಲಿಗರಾಗಿದ್ದಾರೆ. ಆದ್ರೆ ಸೂಪರ್ ಸೀಡ್ ಆಗಿರುವ ಕೆಲವು ಒಕ್ಕೂಟದ ಕಾರಣಕ್ಕಾಗಿ ಸರ್ಕಾರ ಮಧ್ಯಪ್ರವೇಶ ಮಾಡಿದ್ದು, ಸದ್ಯಕ್ಕೆ ಚುನಾವಣೆ ನಡೆಸೋದು ಬೇಡ ಎಂದಿದೆ.

Leave a Reply