ಮಾಜಿ ಸಿಎಂ S M ಕೃಷ್ಣ ಅಳಿಯ ಸಿದ್ದಾರ್ಥ್ ಕಿಡ್ನ್ಯಾಪ್ ಆದ್ರಾ..!?

ಡಿಜಿಟಲ್ ಕನ್ನಡ ಟೀಮ್:

ಮಾಜಿ‌ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಮಂಗಳೂರಿನಲ್ಲಿ ನಾಪತ್ತೆ ಆಗಿದ್ದಾರೆ. ಪ್ರಕರಣದ ಬಗ್ಗೆ ಕಾರು ಚಾಲಕನನ್ನು ವಶಕ್ಕೆ ಪಡೆದಿರುವ ಉಳ್ಳಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ನೇತ್ರಾವತಿ ನದಿ ಸೇತುವೆ ಮೇಲೆ ಕಾರು ನಿಲ್ಲಿಸಿ, ಅಲ್ಲಿಂದ ವಾಕ್‌ಗೆ ಎಂದು ಹೋದವರು ಎಲ್ಲಿದ್ದಾರೆ ಅನ್ನೋ ಮಾಹಿತಿ ತಿಳಿಯುತ್ತಿಲ್ಲ.

ಕಾರಿನಲ್ಲಿ ಹೋಗುತ್ತಿರುವಾಗ ಸಿದ್ದಾರ್ಥ್ ತುಂಬಾ ಸಮಯ ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಿದ್ರು. ಮಂಗಳೂರಿಗೆ ಹೋಗಿದ್ದು, ನೇತ್ರಾವತಿ ನದಿಯ ಬ್ರಿಡ್ಜ್ ಬಳಿ ಕಾರು ನಿಲ್ಲಿಸಿ ಪೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದರು. ಫೋನಿನಲ್ಲಿ ಮಾತನಾಡುತ್ತಾ ವಾಕ್ ಹೋಗಿ ಬರ್ತೀನಿ ಎಂದು ಹೇಳಿ ಹೋದವರು ವಾಪಸ್ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಹೋಗುವಾಗ ಏನೆಲ್ಲಾ ಮಾತಾಡ್ತಿದ್ರು, ಯಾರನ್ನ ಭೇಟಿಯಾಗಿದ್ರು ಅನ್ನೋ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಶ್ನೆಗಳಿಗೆಲ್ಲಾ ಕಾರು ಚಾಲಕ ಉತ್ತರ ಕೊಡುತ್ತಿದ್ದು, ನಿನ್ನೆ ಎಂದಿಗಿಂತ ಹೆಚ್ಚು ಫೋನಿನಲ್ಲಿ ಮಾತಾಡ್ತಿದ್ರು. ಸ್ವಲ್ಪ ಟೆನ್ಷನ್‌ನಲ್ಲಿದ್ರು ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸ್ವತಃ ಮಂಗಳೂರು ಕಮೀಷನರ್ ಸಂದೀಪ್ ಪಾಟೀಲ್ ಮಾಹಿತಿ ಕಲೆಹಾಕುತ್ತಿದ್ದು, ಫೋನ್‌ನಲ್ಲಿ ಮಾತನಾಡಿಕೊಂಡ ಹೋಗುವಾಗ ನಾಪತ್ತೆಯಾಗಿದ್ದಾರೆ ಎಂದರೆ  ಸಿದ್ದಾರ್ಥ್‌ಗೆ ಕರೆ ಮಾಡಿದ್ದ ಆ ವ್ಯಕ್ತಿ ಯಾರು..? ಆ ನಂಬರ್ ಯಾವುದು ಅಂತ ಪರಿಶೀಲನೆ ನಡೆಸಲಾಗ್ತಿದೆ. ಸದ್ಯಕ್ಕೆ ಸಿದ್ಧಾರ್ಥ್ ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿದ್ದು ಲೊಕೇಷನ್ ಪತ್ತೆ ಮಾಡಲು ಸಮಸ್ಯೆಯಾಗಿದೆ. ಹಾಗಾಗಿ ಸಿದ್ದಾರ್ಥ್ ಮೊಬೈಲ್ ನಂಬರ್‌ನ ಸಿಡಿಆರ್ ರಿಪೋರ್ಟ್ ತೆಗೆದುಕೊಂಡಿರುವ ಪೊಲೀಸರು, ಕೊನೆಯದಾಗಿ ಕಾಲ್ ಮಾಡಿದ ವ್ಯಕ್ತಿ ಯಾರು..? ಯಾವ ನಂಬರ್‌ನಿಂದ ಫೋನ್ ಬಂದಿತ್ತು ಅನ್ನೋ ಮಾಹಿತಿಯನ್ನು ಪರಿಶೀಲನೆ ಮಾಡ್ತಿದ್ದಾರೆ.

Leave a Reply