ಮೋದಿ ಒಪ್ಪಿದರೆ ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ ಭಾರತ ಪ್ರಧಾನಿ ಈ ವಿಚಾರವಾಗಿ ಒಪ್ಪಿದರೆ ಮಾತ್ರ ಈ ವಿಚಾರದಲ್ಲಿ ಮುಂದುವರಿಯುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಕಳೆದವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಟ್ರಂಪ್ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ಆದರೆ ಇದನ್ನು ಭಾರತ ಖಂಡಿಸಿತ್ತು. ಈಗ ಮತ್ತೊಮ್ಮೆ ಇದೇ ಇಂಗಿತ ವ್ಯಕ್ತಪಡಿಸಿರುವ ಟ್ರಂಪ್, ಈ ವಿಚಾರದಲ್ಲಿ ಭಾರತದ ಒಪ್ಪಿಗೆ ಮುಖ್ಯ ಎಂದು ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನೆರೆ ರಾಷ್ಟ್ರಗಳು. ಉಭಯ ರಾಷ್ಟ್ರಗಳು ತಮ್ಮ ಬಿಕ್ಕಟ್ಟನ್ನು ಆದಷ್ಟು ಬೇಗೆ ಬಗೆಹರಿಸಿಕೊಂಡು ಸೌಹಾರ್ದ ಸಂಬಂಧ ಹೊಂದುವುದು ಉತ್ತಮ. ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಅತ್ಯುತ್ತಮ ವ್ಯಕ್ತಿಗಳು. ಎರಡು ದೇಶಗಳ ನಡುವಣ ಸಮಸ್ಯೆ ಬಗೆಹರಿಸಲು ಅಮೆರಿಕ ಸಹಾಯ ಮಾಡಲು ಸಿದ್ಧವಿದೆ. ಈಗಾಗಲೇ ನಮ್ಮ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ. ಹೀಗಾಗಿ ಈ ಚಾರದಲ್ಲಿ ಈಗ ಮೋದಿ ಅವರ ನಿರ್ಧಾರ ಮುಖ್ಯವಾಗಲಿದೆ ಎಂದ ಟ್ರಂಪ್ ತಿಳಿಸಿದ್ದಾರೆ.

Leave a Reply