ಕಾಂಗ್ರೆಸ್ ಜೊತೆ ಮೈತ್ರಿ ಸಾಕು ಎಂದ ಕುಮಾರಸ್ವಾಮಿ! ಇದಕ್ಕೆ ಖರ್ಗೆ ಹೇಳಿದ್ದೇನು..?

ಡಿಜಿಟಲ್ ಕನ್ನಡ ಟೀಮ್:

‘ನಮಗೆ ಯಾವುದೇ ಮೈತ್ರಿ ಬೇಡ ಮೈತ್ರಿಯಿಂದ ಏನು ಆಗಬೇಕಿಲ್ಲ. ಉಪ ಚುನಾವಣೆಯಲ್ಲಿ 17 ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸ್ತೇನೆ ಎಂದು ಘೋಷಣೆ ಮಾಡಿದ್ರು. ಈ ಮೂಲಕ ಇನ್ಮುಂದೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಬೇಡ…’ ಇದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಟ್ಟ ಸಂದೇಶ.

ಇಂದು ಮಂಡ್ಯ ಜಿಲ್ಲೆ ಕಾರ್ಯಕರ್ತರ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಅನರ್ಹ ಶಾಸಕ ನಾರಾಯಣಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

‘ನಾನು ಯಾವುದೇ ರೀತಿಯ ಪಕ್ಷದ ಅಭ್ಯರ್ಥಿಯನ್ನು ಅಯ್ಕೆ ಮಾಡಲು‌ ಬಂದಿಲ್ಲ. ಕ್ಷೇತ್ರದ ಪ್ರಮುಖ ಮುಖಂಡರ ಸಭೆ ಕರೆದಿದ್ದೇನೆ, ಇದ್ರಲ್ಲಿ ನಿಮ್ಮ ಅಭಿಪ್ರಾಯ ಪಡೆಯಲಿದ್ದೇನೆ ಅಂದ್ರು. ಕೆ.ಆರ್.ಪೇಟೆಗೂ ಜೆಡಿಎಸ್ ಪಕ್ಷಕ್ಕೂ ಅವಿನಾವಭಾವ ಸಂಬಂಧವಿದೆ. ಈ ಕಾರಣದಿಂದಲೇ ನಮ್ಮ ತಂದೆಗೆ ದೇವೇಗೌಡ್ರಿಗೆ ಈ ಭಾಗದ ಮೇಲೆ ವಿಶೇಷ ಒಲವಿದೆ. ಇಂದಿನ ಪರಿಸ್ಥಿತಿಗೆ ನಾವೇ ಕಾರಣರು ನಮ್ಮ ಕುಟುಂಬದವರು ಮಾಡಿಕೊಂಡ ಸ್ವಯಂಕೃತ ಅಪರಾಧ ಎಂದ ಅವರು, ನಾನು ನಿಮ್ಮನ್ನು ದೂಷಿಸೋದಿಲ್ಲ, ಇದ್ರಲ್ಲಿ ನನ್ನದು ತಪ್ಪಿದೆ. ಬಿಟ್ಟು ಹೋದ ಆತನ ವಿರುದ್ದ ನಾನೇನು ಮಾತನಾಡಲ್ಲ, ಆತನ ಎಲ್ಲವನ್ನೂ ನಾನು ಕೆದಕಲು ಹೋಗಲ್ಲ ಎಂದು ನಾರಾಯಣ ಗೌಡ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ರು.

ನಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ನಮ್ಮದು ಮುಖ್ಯಮಂತ್ರಿ ಯಿಂದ ಪ್ರಧಾನಿ ಕುರ್ಚಿಯವರೆಗೂ ಹೋಗಿ ಬಂದಿರೋ ಕುಟುಂಬ ನಮ್ಮದು. ಅನರ್ಹ ಶಾಸಕ 2013 ರಲ್ಲಿ ನಮ್ಮನ್ನೆಲ್ಲಾ ಮರಳು ಮಾಡಿ‌ ಏನೋ ಸಾಧಿಸುವುದಾಗಿ ಹೇಳಿ ಟಿಕೆಟ್ ಗಿಟ್ಟಿಸಿಕೊಂಡ. ಅಂದು‌ ಆತ ಚುನಾವಣೆ ಗೆಲ್ಲಬೇಕಾದ್ರೆ ನನ್ನ ಕುಟುಂಬದವರು ಕ್ಷೇತ್ರದ ಪ್ರತಿಯೊಂದು ಊರೂರು ಸುತ್ತಿ ಗೆಲ್ಲಿಸಿಕೊಟ್ಟರು. ಆದ್ರೆ ತಮ್ಮ ಕುಟುಂಬದ ವಿಚಾರವಾಗಿ ಮಾತನಾಡಿದ’ ಎಂದು ನಾರಾಯಣಗೌಡ ಆಕ್ರೋಶ ಹೊರಹಾಕಿದರು.

‘ತಂಗಿ ಹಾಗೂ ಆವರ ಕುಟುಂಬದ ವಿರುದ್ದ ಮಾತನಾಡಿದ, ಭಾವನ ಮಗಳ ಮದುವೆ ದುಡ್ಡು ಕೊಟ್ಟಿದ್ದೇನೆಂದು ಹೇಳಿಕೊಂಡ. ಆದ್ರೆ ನಾನು ಈ ಬಾರಿ ಪುರಸಭೆ ಚುನಾವಣೆ ವೆಚ್ಚಕ್ಕೂ ನಾನೇ ಹಣ ಕೊಟ್ಟಿದ್ದೇನೆ. ಅದನ್ನು ನಾನೇ ಕೊಟ್ಟೆ ಎಂದು ಬೇಕಾದ್ರೆ ಹೇಳಿಕೊಳ್ಳಬಹುದು. ಕೆ.ಆರ್.ಪೇಟೆಗೆ ಏನೂ ಕೊಟ್ಟಿಲ್ಲ ಅಂತಾನೇ ಈತ, ನಾವು ಏನು ಕೊಟ್ಟಿದ್ದೀನಿ ಅನುದಾನ ಅನ್ನೋ ಬಗ್ಗೆ ದಾಖಲೆಗಳು ನಮ್ಮ ಬಳಿ ಇವೆ’ ಎಂದಿದ್ದಾರೆ.

‘ನಾನು ಯಾವತ್ತು ನನ್ನ ಜನಾಂಗವನ್ನು ಅಧಿಕಾರ ಉಳಿಸಿಕೊಡಿ ಎಂದು ಕರೆಯಲಿಲ್ಲ. ಅಂದಿನ ನಮ್ಮ ಸರ್ಕಾರ ರಚನೆಯಾದಾಗ ಬಿಎಸ್‌ವೈ ಸಿಎಂ ಆಗಲು ವಿರಶೈವರು ಸಹಕರಿಸಿ ಎಂದು ಕರೆ ನೀಡಿದ್ರು. ಇಂದಿನ ಸರ್ಕಾರದಲ್ಲಿ ಒಕ್ಕಲಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಿಮ್ಮ ಒಮ್ಮತದ ಅಭಿಪ್ರಾಯದಂತೆ ಸ್ಥಳೀಯ ಅಭ್ಯರ್ಥಿಯನ್ನೆ ಆಯ್ಕೆ ಮಾಡ್ತೀವಿ ಬೇರೆ ಯಾರನ್ನು‌ ಅಭ್ಯರ್ಥಿ ಮಾಡಲ್ಲ. ಆದ್ರೆ ನಿಮ್ಮ ಸ್ಥಳೀಯ ಅಭ್ಯರ್ಥಿಗೆ ನನ್ನ ಮಗನಿಗೆ ವಿಷ ಹಾಕಿದಂತೆ ಹಾಕಬೇಡಿ’ ಎಂದು ಮನವಿ ಮಾಡಿದರು.

ಮೈತ್ರಿ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ‘ನಮಗೆ ಯಾವುದೇ ಮೈತ್ರಿ ಬೇಡ ಮೈತ್ರಿಯಿಂದ ಏನು ಆಗಬೇಕಿಲ್ಲ. ಉಪ ಚುನಾವಣೆಯಲ್ಲಿ 17 ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸ್ತೇನೆ ಎಂದು ಘೋಷಣೆ ಮಾಡಿದ್ರು. ಈ ಮೂಲಕ ಇನ್ಮುಂದೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಬೇಡ ಅನ್ನೋದನ್ನು ತಿಳಿಸಿದ್ರು. ಇನ್ಮುಂದೆ ಮೈತ್ರಿ ಮಾಡಿಕೊಳ್ಳಲ್ಲ. ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ’ ಎನ್ನುತ್ತಿದ್ದಂತೆ ‘ಮೈತ್ರಿ ಬೇಡವೇ ಬೇಡ’ ಎಂದು ಕಾರ್ಯಕರ್ತರು ಕೂಗಿದ್ರು.

ಕೆ.ಆರ್ ಪೇಟೆ ತಾಲೂಕು ಅಧ್ಯಕ್ಷ ಸುಬ್ಬೇಗೌಡ ವಾಗ್ದಾಳಿ ನಡೆಸಿದ್ದು, ‘ಅನರ್ಹ ಶಾಸಕ ಭ್ರಷ್ಟಾಚಾರಿ, ಕಮಿಷನ್ ಆಸೆಗೆ ಕಾರ್ಯಕರ್ತರನ್ನು ಬಲಿಕೊಟ್ಟ ಭ್ರಷ್ಟ’ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪೂರ್ಣ ಮಾಹಿತಿ ಇಲ್ಲ, ವಿವರಗಳನ್ನ ತಿಳಿದುಕೊಂಡು ನಂತರ ಹೇಳ್ತೇನೆ. ಯಾವ ಸಂದರ್ಭದಲ್ಲಿ ಯಾಕೆ ಹೇಳಿದ್ದಾರೆ ಅಂತ ತಿಳಿಕೊಂಡು ಹೇಳ್ತೇನೆ. ಇಲ್ಲಿಯವರೆಗೂ ಕಾಂಗ್ರೆಸ್ – ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಇತ್ತು. ಮೈತ್ರಿ ಇರಬೇಕು ಎಂಬುದು ನಮ್ಮ ಅಪೇಕ್ಷೆ, ನಮ್ಮ ಕಾಂಗ್ರೆಸ್ ಹೈಕಮಾಂಡ್‌ದು ಸಹ. ಆದ್ರೆ ಇಲ್ಲಿ ಬೆಳವಣಿಗೆ ಏನಾಗಿದೆ ಎಂಬುದು ಗೊತ್ತಿಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

Leave a Reply