ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಗೆ ಮುಕ್ತಿ ನೀಡುವುದೇ ಅಮಿತ್ ಶಾ ಮುಂದಿನ ಗುರಿ?

ಡಿಜಿಟಲ್ ಕನ್ನಡ ಟೀಮ್:

ಭಾರತ-ಬಾಂಗ್ಲಾದೇಶ ಗಡಿ ಮೂಲಕವಾಗಿ ಈಶಾನ್ಯ ರಾಜ್ಯಗಳಲ್ಲಿ ಅಕ್ರಮವಾಗಿ ವಲಸೆ ಬಂದು ನೆಲೆಸುತ್ತಿರುವ ಸಮಸ್ಯೆಯನ್ನು ಕೇಂದ್ರ ಗೃಹ ಗೃಹ ಸಚಿವ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದಾರೆ. ಬುಧವಾರ ಬಾಂಗ್ಲಾದೇಶದ ಗೃಹ ಸಚಿವ ಅಸಾದುಜಮಾನ್ ಖಾನ್ ಅವರ ಜತೆ ಮಾತುಕತೆ ನಡೆಸಿದ ಶಾ, ಈ ವಿಚಾರದ ಬಗ್ಗೆ ಚರ್ಚಿಸಿದ್ದಾರೆ.

ಇತ್ತೀಚೆಗೆ ತ್ರಿವಳಿ ತಲಾಕ್ ನಿಷೇಧ ಕಾಯಿದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಈ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ವಿಶೇಷ ಸ್ಥಾನಮಾನ ತೆರವುಗೊಳಿಸಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದವು. ಇದರ ಬೆನ್ನಲ್ಲೇ ಅಮಿತ್ ಶಾ ಅವರ ಮುಂದಿನ ಗುರಿ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಎನ್ ಸಿಆರ್ ಮೂಲಕ ಮೂಲ ನಿವಾಸಿಗಳಿಗೆ ರಕ್ಷಣೆ ನೀಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಈ ವಿಚಾರವಾಗಿ ಬಾಂಗ್ಲಾ ಜತೆಗೂ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ.

ಬಾಂಗ್ಲಾದೇಶದ ಸಚಿವರ ಜತೆಗಿನ ಏಳನೇ ಸಭೆಯಲ್ಲಿ ಮ್ಯಾನ್ಮಾರ್ ಅಕ್ರಮ ವಲಸಿಗರು ಅಥವಾ ರೊಹಿಂಗ್ಯ ಮುಸಲ್ಮಾನರ ಅಕ್ರಮ ಪ್ರವೇಶ ಸಮಸ್ಯೆಯನ್ನು ಬಾಂಗ್ಲಾದೇಶ ನಿಭಾಯಿಸಲು ಭಾರತ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಲಾಗಿದೆ. ಎರಡು ದೇಶಗಳ ಗಡಿಯಲ್ಲಿ ಸೇನೆಗಳ ಪರಸ್ಪರ ಸಹಕಾರ ಉಭಯ ದೇಶಗಳ ನಡುವಣ ಸಂಬಂಧ ವೃದ್ಧಿಗೆ ಮಹತ್ವ ನೀಡಲಾಗಿದೆ. ಇನ್ನು ಉಭಯ ದೇಶಗಳು ಇದೇ ಮೊದಲ ಬಾರಿಗೆ ಪ್ರತಿ ವಲಯದಲ್ಲೂ ಪರಸ್ಪರ ಸಹಕಾರಕ್ಕೆ ಮುಂದಾಗಿದೆ ಎಂದು ಉಭಯ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಬಾಂಗ್ಲಾದೇಶ ತನ್ನ ನೆಲದಲ್ಲಿ ತೀವ್ರವಾದಿಗಳಿಗೆ ಅವಕಾಶ ನೀಡದೇ ತನ್ನ ನೆಲದಿಂದ ಭಾರತ ಹಾಗೂ ಇತರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಅವಕಾಶ ನೀಡದಿರುವುದನ್ನು ಶಾ ಶ್ಲಾಘಿಸಿದರು.

Leave a Reply