ನಿಲ್ಲದ ಮಳೆ… ಮುಂದುವರಿದ ರಜೆ… ಬದಲಾಗಿಲ್ಲ ಪ್ರವಾಹ ಪೀಡಿತರ ದುಸ್ಥಿತಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಮುಕ್ಕಾಲು ಭಾಗ ಧಾರಾಕಾರ ಮಳೆಗೆ ತತ್ತರಿಸಿದ್ದು, ಸುಮಾರು 15 ಜಿಲ್ಲೆಗಳು ಪ್ರವಾಹದಿಂದಾಗಿ ತತ್ತರಿಸಿವೆ. ಮಳೆ ನಿರಂತರವಾಗಿ ಸುರಿದು ಪ್ರವಾಹ ಪರಿಸ್ಥಿತಿ ಸುಧಾರಣೆಯಾಗದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಜೆ ಮುಂದುವರಿಸಲಾಗಿದೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದೆ. ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಹೆದ್ದಾರಿ ಮೇಲೆ ನೀರು ನಿಂತಿದೆ.

ಮಡಿಕೇರಿ ಮೈಸೂರು ರಸ್ತೆ ಸಂಪರ್ಕ ಕಡಿತ ಸಾಧ್ಯತೆ ಇದೆ. ಈಗಾಗಲೇ ಮಂಗಳೂರು ರಸ್ತೆಯಲ್ಲಿ ಕೆಲವೆಡೆ ಬಿರುಕು ಬಿಟ್ಟಿದ್ದು, ವಿರಾಜಪೇಟೆ ಮಡಿಕೇರಿ ರಸ್ತೆ ನಿನ್ನೆಯಿಂದಲೇ ಬಂದ್ ಆಗಿದೆ.

ಮಲಪ್ರಭಾ, ಬೆಣ್ಣೆ ಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಗ್ರಾಮ ಸಂಪೂರ್ಣ ಮುಳುಗಡೆ. 15 ಕ್ಕೂ ಹೆಚ್ಚು ಜನ ಗ್ರಾಮದಲ್ಲಿ ಸಿಲುಕಿಕೊಂಡಿದ್ದಾರೆ. ಮನೆಯ ಛಾವಣಿ ಮೇಲೆ ರಕ್ಷಣೆ ಪಡೆದಿದ್ದಾರೆ.

ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆ ಪರಿಣಾಮ 3 ದಿನ ಮುಳುಗಡೆಯಾಗಿರುವ ಹೆಬ್ಬಾಳೆ ಸೇತುವೆ. ಕಳಸ – ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು, ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಶಾರದಾಂಬೆ ನೆಲೆಯಲ್ಲಿ ತುಂಗೆಯ ಪ್ರವಾಹ ಹೆಚ್ಚಾಗಿದೆ. ತುಂಗೆಯ ನೀರಿನ ಮಟ್ಟ ಅಧಿಕವಾಗಿದ್ದು, ಶೃಂಗೇರಿ ದೇವಾಲಯದ ಗಾಂಧಿ ಪಾರ್ಕ್, ಯಾತ್ರಿ ನಿವಾಸಗಳು ಜಲಾವೃತ. ಮಠದ ಊಟದ ಹಾಲಿನ ಕೆಳ ಅತಂಸ್ಥಿಗೂ ನೀರು ನುಗ್ಗಿದೆ. ಶೃಂಗೇರಿ ವ್ಯಾಪ್ತಿಯ ಕಿಗ್ಗ, ಎಸ್.ಕೆ.ಬಾರ್ಡರ್. ಕೆರೆಕಟ್ಟೆ ಭಾಗದಲ್ಲಿ ಭಾರೀ ಮಳೆಗೆ ಜನ ಕಂಗಾಲು.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಲ್ಲಿ ಸಿಎಂ ಯಡಿಯೂರಪ್ಪ ವಾಸ್ತವ್ಯ. ಬಾಗಲಕೋಟೆ – ಗದಗ ಸಂಚಾರ ಬಂದ್ ಸಾಧ್ಯತೆ.

ಉತ್ತರ ಕರ್ನಾಟಕದ ಭಾಗದ ಸಂತ್ರಸ್ತರಿಗೆ ನೆರವಾಗುವಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ.

Leave a Reply