ಕನ್ನಡದ ನಾತಿಚರಾಮಿ, ಕೆಜಿಎಫ್ ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ!

ನವದೆಹಲಿ, ಜು.9

2018-19ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಯಶ್ ಅಭಿನಯದ ಕೆಜಿಎಫ್ ಹಾಗೂ ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಕ್ಕೆ ಪ್ರಶಸ್ತಿಗಳು ಹರಿದು ಬಂದಿವೆ.

ಕೆಜಿಎಫ್ ಅತ್ಯುತ್ತಮ ಸಾಹಸ ಚಿತ್ರ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್ ಪ್ರಶಸ್ತಿ ದೊರೆತಿದೆ. ನಾತಿಚರಾಮಿ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ, ಅತ್ಯತ್ತಮ ಸಾಹಿತ್ಯ, ಅತ್ಯುತ್ತಮ ಸಂಪಾದನೆ ಹಾಗೂ ಶೃತಿ ಹರಿಹರನ್ ಅವರಿಗೆ ತೀರ್ಪುಗಾರರ ಪ್ರಶಂಸೆ ಪ್ರಶಸ್ತಿ ಸಿಕ್ಕಿದೆ.

ಇನ್ನು ರಿಶಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಬಂದಿದೆ. ಇನ್ನು ಒಂದಲ್ಲಾ ಎರಡಲ್ಲ ಚಿತ್ರದಲ್ಲಿ ರೋಹಿತ್ ಅಭಿನಯಕ್ಕೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸಿಕ್ಕಿದೆ.

ಉಳಿದಂತೆ ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ಪದ್ಮಾವತ್ ಚಿತ್ರದ ಸಂಜಯ್ ಲೀಲಾ ಬನ್ಸಾಲಿ, ಬೆಸ್ಟ್ ಸೌಂಡ್ ಡಿಸೈನ್ ಪ್ರಶಸ್ತಿ ಉರಿ ಚಿತ್ರಕ್ಕೆ, ಅತ್ಯುತ್ತಮ ಸಾಮಾಜಿಕ ಕಳಕಳಿ ಪ್ರಶಸ್ತಿ ಪ್ಯಾಡ್ ಮ್ಯಾನ್ ಚಿತ್ರಕ್ಕೆ ದೊರೆತಿದೆ. ಅತ್ಯತ್ತಮ ನಟ ಪ್ರಶಸ್ತಿಗೆ ಅಂಧಾಧುನ್ ಚಿತ್ರದ ಆಯೂಶ್ಮಾನ್ ಋರ್ರಾನ್, ಉರಿ ಚಿತ್ರದ ವಿಕ್ಕಿ ಕೌಶಲ್ ಗೆ ಸಿಕ್ಕಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಮಹಾನಟಿ ಚಿತ್ರದ ಕೀರ್ತಿ ಸುರೇಶ್ ಅವರ ಮಡಿಲಿಗೆ ಬಿದ್ದಿದೆ. ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ಉರಿ ಚಿತ್ರದ ಆಧಿತ್ಯ ಧಾರ್ ಮುಡಿಗೇರಿದೆ.

Leave a Reply