ಮೊಣಕಾಲುದ್ದದ ನೀರಲ್ಲಿ ತೆಪ್ಪ ಸಾಗಿಸಿ ತಿರುಬೋಕಿ ಶೋಕಿ ಮೆರೆದ ರೇಣುಕಾಚಾರ್ಯ!

ಡಿಜಿಟಲ್ ಕನ್ನಡ ಟೀಮ್:

ಪ್ರವಾಹದ ಪ್ರಹಾರಕ್ಕೆ ಸಿಕ್ಕಿ ಜನ ಬದುಕು ಕಳೆದುಕೊಂಡು ಸಾಯುತ್ತಿದರೆ ಮಾಜಿ ಸಚಿವ ರೇಣುಕಾಚಾರ್ಯ ಅವರ ಪ್ರಚಾರದ ತಿರುಬೋಕಿ ಶೋಕಿ ನೋಡಿ!

ಅತ್ತ ಸಿಎಂ ಯಡಿಯೂರಪ್ಪ ಅವರು ‘ನನ್ನ ಜತೆ ಸಚಿವರು ಇಲ್ಲದಿದ್ದರೂ ಶಾಸಕರುಗಳೇ ಆ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳುತ್ತಿದ್ದರೆ, ಇತ್ತ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನಟನೆಯಲ್ಲಿ ನಟಸಾರ್ವಭೌಮ, ಸಾಹಸಸಿಂಹ, ಅಭಿನಯ ಚಕ್ರವರ್ತಿಯನ್ನೇ ಹಿಂದಿಕ್ಕಿದ್ದಾರೆ. ಮೊಣಕಾಲುದ್ದ ಆಳವಿಲ್ಲದ ರಸ್ತೆ ಮೇಲಿನ ನೀರಲ್ಲಿ ತಾವೇ ತೆಪ್ಪ ಸಾಗಿಸಿ ಜನರನ್ನು ರಕ್ಷಿಸುತ್ತಿರುವ ರೀತಿ ಕ್ಯಾಮೆರಾಗೆ ಪೋಸ್ ಕೊಟ್ಟು ಸಾರ್ವಜನಿಕರಿಂದ ಉಗಿಸಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳ ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ. ಆದರೆ ಇದನ್ನೂ ಪ್ರಚಾರಕ್ಜೆ ಬಳಸಿಕೊಳ್ಳಲು ರೇಣುಕಾಚಾರ್ಯ ಮುಂದಾಗಿದ್ದಾರೆ.

ಹೌದು, ರಸ್ತೆ ಮೇಲೆ ಮೊಣಕಾಲುದ್ದ ನೀರಿಲ್ಲದ ಪ್ರದೇಶದಲ್ಲಿ ರೇಣುಕಾಚಾರ್ಯ ತೆಪ್ಪದ ಮೇಲೆ ಕೂತು ನಾಲ್ಕೈದು ಜನರನ್ನು ತಾವೇ ಕಾಪಾಡುತ್ತಿರುವಂತೆ ಪೋಸ್ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.

ರಸ್ತೆ ಮೇಲೆ ನೀರು ಹೆಚ್ಚಾಗಿಲ್ಲ. ಹೀಗಾಗಿ ತೆಪ್ಪವನ್ನು ಮುಂದಕ್ಕೆ ಸಾಗಿಸಲು ರೇಣುಕಾಚಾರ್ಯ ಪರದಾಡುತ್ತಿದ್ದು, ಹಿಂದೆ ಮುಂದೆ, ಅಕ್ಕ ಪಕ್ಕದಲ್ಲಿ ಜನ ತೆಪ್ಪವನ್ನು ಕೈಯಿಂದ ಎಳೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅಲ್ಲದೆ ಸುತ್ತ ಇರುವವರು ಅದನ್ನು ಫೋಟೋ ತೆಗೆಯುತ್ತಿದ್ದಾರೆ.

ರೇಣುಕಾಚಾರ್ಯ ಅವರ ಈ ನಾಟಕವನ್ನು ನೋಡಿ ಜನ ‘ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಆಗದಿದ್ದರೂ ಇಂತಹ ಬಿಟ್ಟಿ ಪ್ರಚಾರಕ್ಕೆ ಕಡಿಮೆ ಇಲ್ಲ’ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಕರಿಸಿ ಉಗಿಯುತ್ತಿದ್ದಾರೆ.

Leave a Reply