ಯಡಿಯೂರಪ್ಪ ಚಿಲ್ಲರೆ ರಾಜಕೀಯ ಬಿಡಲಿ; ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರದ ಖಜಾನೆ ಸುಸ್ಥಿರವಾಗಿದೆ. 8 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ ಸರಿಯಲ್ಲ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಸರಿಯಲ್ಲ. ಯಡಿಯೂರಪ್ಪ ಈ ವಿಚಾರದಲ್ಲಿ ಚಿಲ್ಲರೆ ರಾಜಕೀಯ ಬಿಡಬೇಕು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ನೆರೆ ಸಂತ್ರಸ್ತರಿಗಾಗಿ ಕೇಂದ್ರ ಸರ್ಕಾರ ನೆರೆ ನಿರ್ವಹಣೆಗೆ ತಕ್ಷಣ ಸ್ಪಂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಮಳೆ ಹಾನಿ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಗರದ ಸರಸ್ವತಿಪುರಂನಲ್ಲಿ ಕುಸಿದು ಬಿದ್ದಿದ್ದ  ಅಗ್ನಿಶಾಮಕ ದಳ ಕಟ್ಟಡವನ್ನ ಹೆಚ್.ಡಿ ಕುಮಾರಸ್ವಾಮಿ ವೀಕ್ಷಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

‘ರಾಜ್ಯದ ನೆರೆ ನಿರ್ವಹಣೆ ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಅನಗತ್ಯವಾಗಿ ಟೀಕೆ ರಾಜಕಾರಣ ಮಾಡುವುದಿಲ್ಲ. ರಾಜ್ಯದ ಜನರ ಸಂಕಷ್ಟದಲ್ಲಿದ್ದಾರೆ. ನೊಂದವರಿಗೆ ನೆರವಾಗುವುದೇ ಮೊದಲ ಆದ್ಯತೆ. ಈ ಪರಿಸ್ಥಿತಿಯಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದರು.

ಋಣಮುಕ್ತ ಕಾಯಿದೆ ಜಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ‘ಸರ್ಕಾರ ಕೂಡಲೇ ಯೋಜನೆ ಜಾರಿಗೆ ಮುಂದಾಗಬೇಕು. 90 ದಿನದೊಳಗೆ ಯೋಜನೆ ಜಾರಿಯಾಗಬೇಕು. ಈಗಾಗಲೇ 10 ದಿನ ಕಳೆದಿದೆ. ಯೋಜನೆ ಬಗ್ಗೆ ಹಳ್ಳಿ ಗಳಲ್ಲಿ ಡಂಗುರ ಸಾರುವ ಕೆಲಸ ಆಗಬೇಕು. ಈ ಬಗ್ಗೆ ಶೀಘ್ರದಲ್ಲೇ ಜೆಡಿಎಸ್ ಕಾರ್ಯಕರ್ತರ ಮೂಲಕ ಪ್ರಚಾರ ಮಾಡಿಸುತ್ತೇನೆ’ ಎಂದು ಹೇಳಿದರು.

Leave a Reply