ಬೆಳ್ತಂಗಡಿಯಲ್ಲಿ ಸಂತ್ರಸ್ತರಿಗೆ ವಿವಿಧ ಪರಿಹಾರ ಪ್ರಕಟಿಸಿದ ಸಿಎಂ ಯಡಿಯೂರಪ್ಪ; ಯಾರಿಗೆ ಏನು ಸಿಗುತ್ತೆ?

ಡಿಜಿಟಲ್ ಕನ್ನಡ ಟೀಮ್:

ಇಂದೆಂದೂ ಕಂಡು ಕೇಳರಿಯದಂತಹ ಮಹಾ ಪ್ರವಾಹಕ್ಕೆ ಸಂಪೂರ್ಣವಾಗಿ ತತ್ತರಿಸಿರುವ ಕರ್ನಾಟಕದ 17 ಜಿಲ್ಲೆಗಳು ಮತ್ತೆ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕು. ಸೋಮವಾರ ಬೆಳ್ತಂಗಡಿಯ ಕುಕ್ಕಾವು ಗ್ರಾಮದ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಪ್ರತಿ ಕುಟುಂಬಕ್ಕೆ 10 ಸಾವಿರು ರೂ ತಾತ್ಕಾಲಿಕ ಪರಿಹಾರ ಘೋಷಣೆ ಮೋಡಿದ್ದಾರೆ.

ಗ್ರಾಮದ 321 ಕುಟುಂಬಗಳಿಗೆ ತಲಾ 10 ಸಾವಿರ ಪ್ರಕಟಿಸುವುದರ ಜತೆಗೆ 50-60 ಮನೆಗಳ ರಿಪೇರಿಗೆ ತಲಾ 1 ಲಕ್ಷ ನೀಡಲಾಗುವುದು. ಈ ಗ್ರಾಮದಲ್ಲಿ ಶೇ.75 ರಷ್ಟು ಮನೆಗಳು ನಾಶವಾಗಿದ್ದು, ಒಟ್ಟು 275 ಮನೆಗಳ ಮು ನಿರ್ಮಾಣಕ್ಕೆ 5 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ.

ಸಂತ್ರಸ್ತರಿಗೆ ಹೊಸ ಮನೆ ನಿರ್ಮಾಣಕ್ಕಾಗಿ ಸರಿಯಾದ ಸೈಟುಗಳನ್ನು ಹುಡುಕಲು ಶಾಸಕರಿಗೆ ಸೂಚನೆ ನೀಡಲಾಗಿದೆ. 10-15 ದಿನಗಳಲ್ಲಿ ಸೈಟು ಹುಡುಕಲು ಸಮಯ ನೀಡಲಾಗಿದ್ದು, ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 5 ಸಾವಿರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇನ್ನು ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಪರಿಹಾರ ಘೋಷಿಸಿರುವ ಸಿಎಂ ಅಡಿಕೆ, ತೆಂಗಿನ ಮರಗಳನ್ನು ಲೆಕ್ಕ ಹಾಕಿ ಅವುಗಳಿಗೆ ಪರಿಹಾರ ಒದಗಿಸಲಾಗುವುದು. ಇನ್ನು ದಾಖಲೆ ಹಾಗೂ ಜಾಗಗಳಿಲ್ಲದ ಕುಟುಂಬಗಳಿಗೆ 30-40, 30-50 ಸೈಟು ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.

Leave a Reply