ಜಮ್ಮು ಕಾಶ್ಮೀರದಲ್ಲಿ ರಿಲಾಯನ್ಸ್ ಹೂಡಿಕೆ! ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಪ್ರಕಟಸಿದ ನಿರ್ಧಾರಗಳೇನು?

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಸ್ಥಾನಮಾನ 370ನೇ ವಿಧಿಯನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರದ ಬೆನ್ನಲ್ಲೇ ಖ್ಯಾತಿ ಉದ್ಯಮಿ ಮುಕೇಶ್ ಅಂಬಾನಿ ಮುಂದಿನ ದಿನಗಳಲ್ಲಿ ತಮ್ಮ ರಿಲಾಯನ್ಸ್ ಕಂಪನಿಯ ಮೂಲಕ ಕಮಿವೆ ರಾಜ್ಯದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.

ಸೋಮವಾರ ನಡೆದ 42ನೇ ವಾರ್ಷಿಕ ಸಭೆಯಲ್ಲಿ ಅನೇಕ ಹೊಸ ಯೋಜನೆಗಳನ್ನು ಪರಿಚಯಿಸಲಾಯಿತು. ಈ ವೇಳೆ ಮಾತನಾಡಿದ ಮುಕೇಶ್ ಅಂಬಾನಿ, ‘ರಿಲಾಯನ್ಸ್ ಜಿಯೋ ಪ್ರಾರಂಭವಾಗಿ 3 ವರ್ಷ ಕಳೆದಿದೆ. ಅಲ್ಪ ಅವಧಿಯಲ್ಲಿ ವೇಗವಾಗಿ ಜಿಯೋ ಬೆಳವಣಿಗೆ ಕಂಡಿದೆ. ಪ್ರತಿ ತಿಂಗಳು 1 ಕೋಟಿ ಹೊಸ ಗ್ರಾಹಕರು ಜಿಯೋ ಸೇರುತ್ತಿದ್ದಾರೆ. ಮೂರು ವರ್ಷದಲ್ಲೇ ಜಿಯೋ ಗ್ರಾಹಕರ ಸಂಖ್ಯೆ ದಾಖಲೆಯ 34 ಕೋಟಿಗೆ ಏರಿದೆ. ಇನ್ನು ರಿಲಾಯನ್ಸ್ ರಿಟೇಲ್ ವ್ಯವಹಾರ 1.3 ಲಕ್ಷ ಕೋಟಿ ಮುಟ್ಟಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ರಿಲಾಯನ್ಸ್ ಅತಿ ಹೆಚ್ಚು ತೆರಿಗೆ ಪಾವತಿಸಿದ ಸಂಸ್ಥೆ’ ಎಂದರು.

ಈ ವೇಳೆ ಅಂಬಾನಿ ಹೊಸ ಯೋಜನೆಗಳನ್ನು ಪ್ರಕಟಿಸಿದ್ದು, ಅವುಗಳು ಹೀಗಿವೆ…

  • ಮುಂದಿನ ದಿನಗಳಲ್ಲಿ ಜಿಯೋ ಗಿಗಾಫೈಬರ್ ಆರಂಭವಾಗಲಿದ್ದು, ಇದರ ವೇಗ ಸೆಕೆಂಡಿಗೆ 100 ಎಂಬಿಯಿಂದ 1 ಜಿಬಿ ಇರಲಿದೆ.
  • ವರ್ಚುವಲ್ ರಿಯಾಲಿಟಿ ಹೆಡ್ ಫೋನ್ ಅನ್ನು ಪರಿಚಯಿಸಲಾಗಿದ್ದು, ಮನೆಯಲ್ಲಿ ಸಿನಿಮಾ ನೋಡುವಾಗ ಥಿಯೇಟರ್ ಎಫೆಕ್ಟ್ ನೀಡಲಿದೆ.
  • ಆನ್ ಲೈನ್ ಬಟ್ಟೆ ಖರೀದಿಯಲ್ಲಿ ವರ್ಚುವಲ್ ಆಫ್,ನ್ ನೀಡಲಾಗಿದ್ದು, ನಿಮಗೆ ಇಷ್ಟವಾದ ಬಟ್ಟೆ ಹಾಕಿಕೊಂಡಾಗ ಹೇಗೆ ಕಾಣುತ್ತದೆ ಎಂಬುದನ್ನು ನೋಡಬಹುದು.
  • ಸೆಪ್ಟೆಂಬರ್ 5ರಿಂದ ಪ್ರತಿ ತಿಂಗಳು 700 ರೂ ಪಾವತಿ ಮಾಡಿ ಇಂಟರ್ ನೆಟ್ ಸೇವೆ ಪಡೆಯಬಹುದು.
  • ಗಿಗಾಫೈಬರ್ ಸೇವೆಯಿಂದ ಅಂತರ್ಜಾಲ ಜಗತ್ತೇ ಬದಲಾಗಲಿದ್ದು, ಬ್ರಾಡ್ ಬ್ಯಾಂಡ್, ಲ್ಯಾಂಡ್ ಲೈನ್ ಸೇವೆ ಸಿಗಲಿದೆ.
  • ತಿಂಗಳಿಗೆ 500 ರೂ.ಗೆ 100 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್, 600 ರೂ.ಗೆ ಇಂಟರ್ ನೆಟ್ ಮತ್ತು ಡಿಟಿಎಚ್ ಸೇವೆ.
  • ಪ್ರತಿ ತಿಂಗಳು ಸಾವಿರ 1000 ರೂ.ಗೆ ಬ್ರಾಡ್ ಬ್ಯಾಂಡ್, ಡಿಟಿಎಚ್, ಟಿವಿ ಸೇವೆ ಸಿಗಲಿದೆ.
  • ಕ್ಲೌಡ್ ಸೇವಿಂಗ್ಸ್ ವಿಚಾರವಾಗಿ ಮೈಕ್ರೋಸಾಫ್ಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಕಡಿಮೆ ಬೆಲೆಯಲ್ಲಿ ಕ್ಲೌಡ್ ಸೇವಿಂಗ್ ವ್ಯವಸ್ಥೆ ಸಿಗಲಿದೆ.
  • ಕಣಿವೆ ರಾಜ್ಯದಲ್ಲಿ ಬಂಡವಾಲ ಹೂಡಿಕೆಗೆ ಅವಕಾಶ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಜಮ್ಮು, ಕಾಶ್ಮೀರ ಹಾಗೂ ಲಡಾಕ್ ಪ್ರದೇಶಗಳಲ್ಲಿ ಹೂಡಿಕೆಗೆ ನಿರ್ಧಾರ. ಶೀಘ್ರದಲ್ಲೇ ಘೋಷಣೆ.

Leave a Reply