ಸೇನೆಯಿಂದ 27 ಸಾವಿರ ಜನರನ್ನು ಕೈಬಿಡಲು ಚಿಂತನೆ! ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ತನ್ನ ವಿವಿಧ ಪಡೆಗಳಲ್ಲಿ ಸಕ್ರಿಯವಾಗಿ ಬಳಕೆಯಾಗದ ಸೈನಿಕರನ್ನುಸೇವೆಯಿಂದ ಕೈಬಿಡಲು ಸೇನೆ ನಿರ್ಧರಿಸಿದೆ. ಇದರಿಂದ ಸರ್ಕಾರದ ಪ್ರತಿ ವರ್ಷ 1,600 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಸದ್ಯ ಸೇನೆಯ ವಿವಿಧ ವಿಭಾಗಗಳಲ್ಲಿ ಒಟ್ಟು 12.5 ಲಕ್ಷ ಮಂದಿ ಇದ್ದಾರೆ. ಇದರಿಂದ ಸರ್ಕಾರಕ್ಕೆ ವೆಚ್ಚಗಳು ಹೆಚ್ಚಾಗುತ್ತಿದ್ದು, ಸೇನೆಯಲ್ಲಿನ ಗಾತ್ರವನ್ನು ನಿರ್ದಿಷ್ಟವಾಗಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ. ಮಿಲಿಟರಿ ಇಂಜಿನಿಯರ್ ಸರ್ವೀಸ್, ಎನ್ ಸಿಸಿ, ಬಾರ್ಡರ್ ರೋಡ್ ಆರ್ಗನೈಸೇಷನ್, ಟೆರೆಟೊರಿಯಲ್ ಆರ್ಮಿ ಅಂಡ್ ಸೈನಿಕ್ ಸ್ಕೂಲ್ ಸೇರಿದಂತೆ ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ರೈಫಲ್ಸ್ ಅಂಡ್ ಸ್ಚ್ರೇಟೆಜಿ ಫೋರ್ಸ್ ಕಮಾಂಡ್ ಗಳು ಮಿಲಿಟರಿ ಪಡೆಗಳ ಹೊರತಾಗಿ ಸೇನೆಯ ವಿವಿಧ ವಿಭಾಗಗಳಾಗಿವೆ. ಈ ವಿಭಾಗಗಳಲ್ಲೇ ಒಟ್ಟು 1.75 ಲಕ್ಷ ಅಧಿಕಾರಿಗಳು ಹಾಗೂ ಸೈನಿಕರು ನೇಮಕಗೊಂಡಿದ್ದಾರೆ. ಈ ಎಲ್ಲ ವಿಭಾಗಗಳಲ್ಲಿ ಹೆಚ್ಚುವರಿಯಾಗಿರುವ ಮಾನವ ಸಂಪನ್ಮೂಲವನ್ನು ಕಡಿಮೆ ಮಾಡಲು ಸೇನೆ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಸೇನೆಯ ಮುಖ್ಯ ಕಚೇರಿಯಲ್ಲಿರುವ ಯೋಜಾನ ವಿಭಾಗದ ಪ್ರಧಾನ ನಿರ್ದೇಶಕರು ನೇತೃತ್ವದಲ್ಲಿ ಈ ಬಗ್ಗೆ ಅಧ್ಯಯನ ಮಾಡಿ ಈ ಪ್ರಸ್ತಾವನೆಯನ್ನು ಸೇನೆ ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ನಿರ್ಧಾರದಿಂದ ಗಡಿ ಹಾಗೂ ಇತರೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋರ್ ಮಿಲಿಟರಿ ಪಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸೇನೆಯಲ್ಲಿ ಈ ಸುಧಾರಣೆ ಯಾಕೆ?

  • ನಮ್ಮ ದೇಶದ ವಾರ್ಷಿಕ ಬಜೆಟ್ ನಲ್ಲಿ ಸೇನೆಗೆ ಸಿಂಹಪಾಲು ಮೀಸಲಿಡಲಾಗುತ್ತಿದೆ. ವಾರ್ಷಿಕ ಸೇನೆಯ ಬಜೆಟ್ ಮೊತ್ತ 3.5 ಲಕ್ಷ ಕೋಟಿಯಷ್ಟಿದೆ.
  • 12.5 ಲಕ್ಷ ಮಾನವ ಸಂಪನ್ಮೂಲ ಹೊಂದಿರುವ ಭಾರತೀಯ ಸೇನೆಯಲ್ಲಿ 43 ಸಾವಿರ ಅಧಿಕಾರಿಗಳು ಇದ್ದಾರೆ. ಇವರು ಆರು ಆಪರೇಷನಲ್ ಹಾಗೂ ರೀಜನಲ್ ಕಮಾಂಡ್ ಮತ್ತು 1 ಟ್ರೈನಿಂಗ್ ಕಮಾಂಡ್ ಆಗಿ ವಿಂಗಡಣೆಯಾಗಿದ್ದಾರೆ.
  • 6 ಕಮಾಂಡ್ ಗಳಲ್ಲಿ 14 ಕಾರ್ಪ್ಸ್, 50 ವಿಭಾಗಗಳು ಹಾಗೂ 240 ಬ್ರಿಗೇಡ್ಗಳು ಒಳಪಡುತ್ತವೆ. ಇವರ ವೇತನ ಹಾಗೂ ವೆಚ್ಚಕ್ಕೆ ಸುಮಾರು 1.71 ಲಕ್ಷ ಕೋಟಿ ವೆಚ್ಚ ತಗಲುತ್ತಿದೆ.
  • ಬಜೆಟ್ ಶೇ.83ರಷ್ಟು ಭಾಗ ದಿನ ನಿತ್ಯ ಬಳಕೆ ಮತ್ತು ಸೈನಿಕರು ಹಾಗೂ ಅಧಿಕಾರಿಗಳ ವೇತನಕ್ಕೆ ವೆಚ್ಚವಾಗುತ್ತಿದೆ. ಇನ್ನು ಉಳಿದ ಶೇ.17ರಷ್ಟು ಮೊತ್ತದಲ್ಲಿ ಸೇನೆ ಶಸ್ತ್ರಾಸ್ತ್ರ ನವೀಕರಣಕ್ಕೆ ಬಳಕೆಯಾಗುತ್ತಿದೆ.
  • ಆಧುನಿಕ ಶಸ್ತ್ರಾಸ್ತ್ರ, ಹೆಲಿಕಾಪ್ಟರ್, ಯಎವಿಗಳು, 155 ಎಂಎಂ ಹೌವಿಟ್ಜರ್, ಟ್ಯಂಕ್ ನಿಗ್ರಹ ಕ್ಷಿಪಣಿ ಮತ್ತು ಇತರೆ ಮದ್ದು ಗುಂಡುಗಳ ನಿರ್ವಹಣೆಗೂ ವೆಚ್ಚ ತಗಲುತ್ತದೆ.
  • ಇನ್ನು ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಕೊರತೆ ಇದ್ದು, ಲೆಫ್ಟಿನೆಂಟ್ ಕರ್ನಲ್ ಹಾಗೂ ಅಂವರ ಕೆಳಗಿನ ಅಧಿಕಾರಿಗಳ ಪ್ರಮಾಣ ಕಡಿಮೆ ಇದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೇನೆಯ ವಿವಿಧ ವಿಭಾಗಗಳಲ್ಲಿ ಹೆಚ್ಚುವರಿಯಾಗಿರುವ ಸೈನಿಕರನ್ನು ಕೈಬಿಟ್ಟು ವೆಚ್ಚದ ಪ್ರಮಾಣಕ್ಕೆ ಬ್ರೇಕ್ ಹಾಕಲು ಸೇನೆ ಈ ಸುಧಾರಣೆಗೆ ಬಂದಿದೆ. ಈ ಸುಧಾರಣೆಗಾಗಿ ಸೇನೆ ಅನೇಕ ಅಧ್ಯಯನಗಳನ್ನು ನಡೆಸಿದ್ದು, ಅವುಗಳಲ್ಲಿ ಇದು ಒಂದಾಗಿದೆ.

Leave a Reply