ಕಳ್ಳರ ದಾಳಿಯನ್ನು ದಿಟ್ಟವಾಗಿ ಎದುರಿಸಿದ ವೃದ್ಧ ದಂಪತಿಗಳು! ಸಿಸಿಟಿವಿಯಲ್ಲಿ ಸೆರೆಯಾಯ್ತು ಸಾಹಸ

ಡಿಜಿಟಲ್ ಕನ್ನಡ ಟೀಮ್:

ವಯಸ್ಸಾದವರು ಅಥವಾ ಒಂಟಿ ಮಹಿಳೆಯರಿರುವ ಮನೆ ಕಳ್ಳರ ಫೇವರೆಟ್ ಟಾರ್ಗೆಟ್. ಇದೇ ರೀತಿ ವೃದ್ಧ ದಂಪತಿಗಳಿಗರುವ ಮನೆಗೆ ಕನ್ನ ಹಾಕಲು ಹೋದ ಇಬ್ಬರು ಕಳ್ಳರು ಸರಿಯಾಗಿ ಗೂಸ ತಿಂದು ಪರಾರಿಯಾಗಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ಭಾನುವಾರ ರಾತ್ರಿ ಊಟ ಮುಗಿಸಿ ವೃದ್ಧ ದಂಪತಿಗಳು ಮನೆ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಪತ್ನಿ ಸೆಂಥಮರೈ (68) ಅವರು ಮನೆಯೊಳಗೆ ಹೋದಾಗ ಸುಸುಕುಧಾರಿ ವ್ಯಕ್ತಿಯೊಬ್ಬ ಹಿಂದೆಯಿಂದ ಬಂದು ಷಣ್ಮುಗಮ್ ಅವರ ಸುಖವನ್ನು ಬಟ್ಟೆಯಿಂದ ಸುತ್ತಿ ದಾಳಿ ಮಾಡಿದ. ತಕ್ಷಣ ಷಣ್ಮುಗಮ್ ಕೂಗಾಡಿದರು. ತಕ್ಷಣವೇ ಹೊರಬಂದ ಪತ್ನಿ ಕಳ್ಳನ ಮೇಲೆ ಕೈಗೆ ಸಿಕ್ಕಿದ ವಸ್ತುವನ್ನು ಎಸೆದರು. ಈ ವೇಳೆ ಕಳ್ಳ ವಿಚಲಿತನಾಗಿದ್ದು ಷಣ್ಮುಗಮ್ ಅವರು ಬಿಡಿಸಿಕೊಂಡರು. ಅಷ್ಟರಲ್ಲಿ ಮತ್ತೊಬ್ಬ ಕಳ್ಳ ದಾಳಿಗೆ ಮುಂದಾದ ಆಗ ವೃದ್ಧ ದಂಪತಿಗಳು ಪ್ರತಿ ದಾಳಿ ಮಾಡಿ ಇಬ್ಬರನ್ನು ಬೆಂಡೆತ್ತಲು ಶುರು ಮಾಡಿದರು. ಆಗ ಬೇರೆ ದಾರಿ ಇಲ್ಲದೆ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಘಟನೆ ಬಗ್ಗೆ ದಂಪತಿಗಳು ಪೊಲೀಸ್ ದೂರು ನೀಡಿದ್ದು, ಸಿಸಿಟಿವಿ ದೃಷ್ಯ ಪರಿಶೀಲಿಸಿದ ನಂತರ ಇಬ್ಬರಲ್ಲಿ ಒಬ್ಬ ಕಳ್ಳನನ್ನು ಪತ್ತೆ ಹಚ್ಚಿದ್ದು ಶೀಘ್ರವೇ ಇಬ್ಬರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Leave a Reply