ಕೋಮಲ್ ಗಲಾಟೆ; ಸುದೀಪ್ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಕೋಮಲ್ ಹಾಗೂ ವಿಜಯ್ ಎಂಬ ವ್ಯಕ್ತಿ ನಡುವಣ ರಸ್ತೆ ರಂಪಾಟ ಪ್ರಕರಣ ಈಗ ಗಾಂಧಿ ನಗರದತ್ತ ತಿರುಗಿನೋಡುವಂತೆ ಮಾಡಿದೆ. ಈ ಪ್ರಕರಣ ನಡೆಯುತ್ತಿದ್ದಂತೆ ಕೆಲವರು ಸುದೀಪ್ ಹೆಸರನ್ನು ತಳಕು ಹಾಕುವ ಪ್ರಯತ್ನ ಮಾಡಲಾಗಿದ್ದು, ಈ ಕುರಿತು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಚಿತ್ರರಂಗದವರ ಕೈವಾಡದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ ಜಗ್ಗೇಶ್ ಅವರೇ, ಕೋಮಲ್ ಅವರ ಪ್ರಕರಣಕ್ಕೂ ಸುದೀಪ್ ಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ‘ನಿನ್ನೆ ನಡೆದ ಕೋಮಲ್ ಮೇಲಿನ ಹಲ್ಲೆ ಪ್ರಕರಣಕ್ಕೂ ಸುದೀಪ್ ಗೂ ಸಂಬಂಧ ಇಲ್ಲ. ಸುಖಾಸುಮ್ಮನೆ ಸುದೀಪ್ ಅವರ ಹೆಸರು ಎಳೆದು ತರುವುದು ಸರಿಯಲ್ಲ. ಸುದೀಪ್ ನನ್ನ ಒಡಹುಟ್ಟದಿದ್ದರೂ ಸಹೋದರ ಇದ್ದಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಬೆಲೆ ಕಟ್ಟೋಕೆ ಸಾಧ್ಯವಿಲ್ಲ. ಒಳ್ಳೆಯ ವಿಷಯ ಬರೆಯಿರಿ, ಯಾರ ಮನ ಕೆಡಿಸಬೇಡಿ’ ಅಂತ ಜಗ್ಗೇಶ್ ಹೇಳಿದ್ದಾರೆ.

Leave a Reply