ಡಿಜಿಟಲ್ ಕನ್ನಡ ಟೀಮ್:
ದೇಶ ಕಂಡ ಅತ್ಯುತ್ತಮ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ನಮನ ಸಲ್ಲಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 16ರಂದು ಏಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ವಾಜಪೇಯಿ ಅವರು ಅಂತಿಮ ಉಸಿರೆಳೆದಿದ್ದರು. ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಇತರೆ ನಾಯಕರು ಗೌರವ ಸಲ್ಲಿಸಿದ್ದಾರೆ.
ವಾಜಪೇಯಿ ಅವರ ಸ್ಮಾರಕ ಸದೈವ್ ಅಟಲ್ ಗೆ ಭೇಟಿ ನೀಡಿದ ಮೋದಿ ಹಾಗೂ ಇತರೆ ಗಣ್ಯರು ಗೌರವ ಸಲ್ಲಿಸಿದರು. ಈ ವೇಳೆ ವಾಜಪೇಯಿ ಅವರು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನಿಹಾರಿಕ ಅವರೂ ಕೂಡ ಉಪಸ್ಥಿತರಿದ್ದರು.