ಕಾಶ್ಮೀರ ಕ್ಯಾತೆ: ಪಾಕಿಸ್ತಾನ ಬೆನ್ನಿಗೆ ನಿಂತ ಚೀನಾ! ಇಂದು ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ ಸಭೆ

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರಕ್ಕೆ ನಿಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂಬ ಪಾಕಿಸ್ತಾನದ ಕೂಗಿಗೆ ಈಗ ಚೀನಾ ಧ್ವನಿಯಾಗಲು ಮುಂದಾಗಿದೆ. ಪರಿಣಾಮ ಪಾಕಿಸ್ತಾನದ ಪರವಾಗಿ ಚೀನಾ ಈ ವಿಚಾರವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಚರ್ಚೆಗೆ ಪ್ರಸ್ತಾವನೆ ನೀಡಿದ್ದು, ಶುಕ್ರವಾರ ಈ ವಿಚಾರ ಚರ್ಚೆಗೆ ಬರಲಿದೆ.

ಈ ಸಭೆ ಗುಪ್ತ ಸಭೆಯಾಗಲಿದ್ದು, 1965ರ ಬಳಿಕ ಮೊದಲ ಬಾರಿಗೆ ಕಾಶ್ಮೀರ ವಿಚಾರವಾಗಿ ಗುಪ್ತ ಸಭೆ ನಡೆಯಲಿದೆ. ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಿ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಚೀನಾಕ್ಕೆ ಮನವಿ ಸಲ್ಲಿಸಿದರು. ಹೀಗಾಗಿ 370ನೇ ವಿಧಿ ರದ್ದು ಕುರಿತು ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಬೇಕು ಎಂದು ಮನವಿ ಮಾಡಿದ ಬೆನ್ನಲ್ಲೇ ಚೀನಾ ಅಧಿಕೃತವಾಗಿ ಈ ವಿಚಾರವಾಗಿ ಚರ್ಚಿಸಲು ವಿಶ್ವಸಂಸ್ಥೆ ಭದ್ಪತಾ ಸಮಿತಿಯಲ್ಲಿ ಒತ್ತಾಯ ಮಾಡಿದೆ. ಹೀಗಾಗಿ ಶುಕ್ರವಾರ ರಾತ್ರಿ 7.30ಕ್ಕೆ ಈ ವಿಚಾರವಾಗಿ ಗುಪ್ತ ಸಭೆ ನಡೆಯಲಿದೆ.

Leave a Reply