ಶೆಟ್ಟರ್ ಖಾತೆಗೆ ಕೊಕ್ಕೆ ಹಾಕಿದ್ರಾ ಯಡಿಯೂರಪ್ಪ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಿನತ್ತ ಮುನ್ನುಗ್ಗುತ್ತಿದೆ. ಆದ್ರೆ ರಾಜ್ಯ ಸರ್ಕಾರದಲ್ಲಿ ಇರೋದು ಏಕೈಕ ಮುಖ್ಯಮಂತ್ರಿ. ಸಚಿವ ಸಂಪುಟದಲ್ಲಿ ಯಾರೊಬ್ಬರೂ ಸಚಿವರಿಲ್ಲ. ಕಳೆದ ಬಾರಿ ಸಚಿವ ಸಂಪುಟ‌ ವಿಸ್ತರಣೆ ಮಾಡುವ ಉದ್ದೇಶದಿಂದ ದೆಹಲಿಗೆ ಹೋಗಿದ್ದ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸಿಕ್ಕಿರಲಿಲ್ಲ. ಆ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಆಗಸ್ಟ್ 16 ರಂದು ದೆಹಲಿಗೆ ಬರುವಂತೆ ಸೂಚನೆ ಕೊಟ್ಟು ತೆರಳಿದ್ರು. ಅದೇ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಇನ್ನೂ ಒಂದು ದಿನ ಬಾಕಿ ಇರುವಂತೆ ರಾಷ್ಟ್ರ ರಾಜಧಾನಿ ತಲುಪಿದರೂ ಅಮಿತ್ ಶಾ ಭೇಟಿ ಸಾಧ್ಯವಾಗಿಲ್ಲ. ಈ ನಡುವೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ನಾಯಕರೂ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಅದರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಸಂಪುಟ ಸ್ಥಾನ ಡೌಟ್ ಎನ್ನಲಾಗ್ತಿದೆ.

ಇಂದು ಅಮಿತ್ ಶಾ ಭೇಟಿ ಮಾಡಲಿರುವ ಸಿಎಂ‌ ಯಡಿಯೂರಪ್ಪ, ಬಹುತೇಕ ಸಂಪುಟ ಸಚಿವರ ಪಟ್ಟಿಯೊಂದಿಗೆ ಬೆಂಗಳೂರಿಗೆ ವಾಪಸ್ ಬರ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಕಳೆದ ಬಾರಿಯಂತೆ ಅಮಿತ್ ಶಾ ಅವರು ಯಡಿಯೂರಪ್ಪ ಜೊತೆ‌ ಚರ್ಚೆ ಮಾಡದೆ, ಪಟ್ಟಿ ಕೊಟ್ಟು ಹೋಗಲು ತಿಳಿಸಿ, ಆ ಬಳಿಕ ಅಂತಿಮ‌ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿ ರಾಜ್ಯಕ್ಕೆ ಕಳುಹಿಸ್ತಾರಾ ಅನ್ನೊ ಅನುಮಾನವೂ ದಟ್ಟವಾಗಿದೆ. ಯಾಕಂದ್ರೆ ಕಳೆದ ಬಾರಿ‌ ಯಡಿಯೂರಪ್ಪ ಸಿಎಂ ಆಗಿದ್ದಕ್ಕೂ ಈ ಬಾರಿ ಆಪರೇಷನ್ ಕಮಲ ಮಾಡಿ ಸಿಎಂ ಆಗಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದೇ ಕಾರಣಕ್ಕೆ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿ 20 ದಿನಗಳು ಕಳೆದರೂ ಸಂಪುಟಕ್ಕೆ ಗ್ರೀನ್ ಸಿಗ್ನಲ್‌ ಸಿಕ್ಕಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿವೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ‌ ಬಿಎಸ್‌ವೈ ಸಂಪುಟ ಸೇರಲು ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ತುದಿಗಾಲಿನಲ್ಲಿ ನಿಂತಿದ್ದು, ಹೇಗಾದರೂ ಸರಿ ಬಿಎಸ್‌ವೈ ಸಂಪುಟ ಸೇರಲು ತೀವ್ರ ಲಾಬಿ ಮಾಡುತ್ತಿದ್ದಾರೆ. ಆದ್ರೆ ಮಾಜಿ‌ ಸಿಎಂ ಜಗದೀಶ್ ಶೆಟ್ಟರ್‌ಗೆ ಬಿ.ಎಸ್ ಯಡಿಯೂರಪ್ಪ ಕೂಡ ಸಚಿವ ಸ್ಥಾನ ನೀಡಲು ಮನಸ್ಸಿಲ್ಲ. ಹಾಗಾಗಿ‌ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ‌ ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಏರಿದರೂ‌ ಯಾವುದೇ ಭರವಸೆ ಸಿಗುತ್ತಿಲ್ಲ. ಹೀಗಾಗಿ ಜಗದೀಶ್ ಶೆಟ್ಟರ್‌ಗೆ ಮಂತ್ರಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗ್ತಿದೆ.

ಸಿಎಂ ಯಡಿಯೂರಪ್ಪ ಪಟ್ಟಿಯಲ್ಲೂ ಇಲ್ಲ ಜಗದೀಶ್ ಶೆಟ್ಟರ್ ಹೆಸರು. ದೆಹಲಿ ನಾಯಕರಿಂದಲೂ ಜಗದೀಶ್ ಶೆಟ್ಟರ್ ಭರವಸೆ ಸಿಕ್ಕಿಲ್ಲ. ನೀವು ಈಗಾಗಲೇ ಕರ್ನಾಟಕದ ಸಿಎಂ ಆಗಿದ್ದವರು ಮಂತ್ರಿ ಸ್ಥಾನ ಏಕೆ ಬೇಕು ‌ಎಂದು ಪ್ರಶ್ನಿಸಿದ್ದಾರೆ..? ಮುಖ್ಯಮಂತ್ರಿ ಆಗಿದ್ದವರು ಬರೀ ಮಂತ್ರಿ ಆಗುವುದು ಸೂಕ್ತವೇ.. ಬೇಡ ಸಚಿವ ಸ್ಥಾನ ಎಂದು‌ ಜಗದೀಶ್ ಶೆಟ್ಟರ್‌ಗೆ ವರಿಷ್ಠರು ಹುದ್ದೆಯ ಪಾಠ ಹೇಳಿಕೊಟ್ಟಿದ್ದಾರೆ. ಆದರೂ ಸಚಿವ ಸ್ಥಾನ ಪಡೆಯಲು ಜಗದೀಶ್ ಶೆಟ್ಟರ್ ಕೊನೆಯ ಕಸರತ್ತು ಆರಂಭಿಸದ್ದು, ಸಚಿವ ಸ್ಥಾನ ಪಡೆದೇ ತೀರಬೆಕು‌ ಅನ್ನೋ‌ ಹಠಕ್ಕೆ‌ ಬಿದ್ದಿದ್ದಾರೆ ಎನ್ನಲಾಗಿದೆ. ಆದ್ರೆ ಮುಖ್ಯಮಂತ್ರಿ ಆಗಿದ್ದವರು ಸಚಿವರಾದರೆ‌ ಡಿಗ್ರೇಡ್ ಹಾಗಾಗಿ ಬೇಡ ಎಂದು ಕೇಂದ್ರ‌ ನಾಯಕರೂ ಮನವೊಲಿಕೆ ಕೆಲಸ ಶುರುಮಾಡಿದ್ದಾರೆ ಎನ್ನಲಾಗ್ತಿದೆ.

Leave a Reply