ಡಾ.ವಿಷ್ಣುವರ್ಧನ ನಾಟಕೋತ್ಸವ: ಯಜಮಾನನಿಗೆ ರಂಗನಮನ

ಡಿಜಿಟಲ್ ಕನ್ನಡ ಟೀಮ್:

ಡಾ.ವಿಷ್ಣು ಸೇನಾ ಸಮಿತಿಯು ಕನ್ನಡಿಗರ ಯಜಮಾನ ಎಂದೇ ಖ್ಯಾತಿ ಪಡೆದಿರುವ ವಿಷ್ಣುವರ್ಧನ್ ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಆಯೋಜಿಸಿ ಅಭಿನಯ ಭಾರ್ಗವನಿಗೆ ರಂಗನಮನ ಸಲ್ಲಿಸುತ್ತಿದೆ.

ರಾಷ್ಟ್ರೀಯ ಆದರ್ಶ ದಿನಾಚರಣೆ ಅಂಗವಾಗಿ ಸೆ.18, 19 ಮತ್ತು 20ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೂ ನಾಟಕೋತ್ಸವವನ್ನು ಆಯೋಜಿಸಲಾಗುತ್ತಿದೆ. ಈ ನಾಟಕೋತ್ಸವದಲ್ಲಿ ಬೆಂಗಳೂರಿನ ತಂಡಗಳು ಮಾತ್ರವಲ್ಲದೇ ರಾಜ್ಯದ ಇತರೆ ಭಾಗಗಲಾದ ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಕರಾವಳಿ, ಕಿತ್ತೂರು ಸೇರಿದಂತೆ ಅನೇಕ ಭಾಗಗಳಿಂದ ತಂಡಗಳು ಭಾಗವಹಿಸುತ್ತಿವೆ. ಇದರೊಂದಿಗೆ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಭಾಗದ ನಾಯಕ ತಂಡಗಳು ಸೇರುತ್ತಿರುವ ನಾಟಕೋತ್ಸವ ಇದಾಗಿದೆ.

ಈ ನಾಟಕೋತ್ಸವದಲ್ಲಿ ನಟನ ಮೈಸೂರು, ರಂಗ ಪಯಣ ಬೆಂಗಳೂರು, ಗಂಗಾವತರಣ ಧಾರವಾಡ, ಅನಲ ಕರಾವಳಿ, ಅಶ್ವಘೋಷ್ ಸಹಯೋಗ: ರಂಗಪಯಣ ತಂಡಗಳು ಭಾಗವಹಿಸುತ್ತಿವೆ.

Leave a Reply