ಅಂತೂ ಇಂತೂ ಸಂಪುಟಕ್ಕೆ ಸಿಕ್ತು ಶಾ ಗ್ರೀನ್ ಸಿಗ್ನಲ್; ಮಂಗಳವಾರ ಯಾರಾಗ್ತಾರೆ ಮಿನಿಸ್ಟರ್!?

ಡಿಜಿಟಲ್ ಕನ್ನಡ ಟೀಮ್:

ಅಧಿಕಾರಕ್ಕೆ ಬಂದು 22 ದಿನಗಳಿಂದ ಒನ್ ಮ್ಯಾನ್ ಸರ್ಕಾರವಾಗಿದ್ದ ಬಿಎಸ್ ವೈಗೆ ಈಗ ಸಚಿವ ಸಂಪುಟ ಭಾಗ್ಯ ಸಿಕ್ಕಿದೆ. ಅದೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಶೀರ್ವಾದದಿಂದ.

ಶನಿವಾರ ರಾತ್ರಿ ಅಮಿತ್ ಶಾ ಭೇಟಿ ಮಾಡಿದ ಸಿಎಂ ಯಡಿಯೂರಪ್ಪ ಕೊನೆಗೂ ಸಚಿವ ಸಂಪುಟ ರಚನೆಗೆ ಒಪ್ಪಿಗೆ ಪಡೆದಿದ್ದಾರೆ.

ಪ್ರಮುಖ ವಿಷಯ ಏನಪ್ಪಾ ಅಂದ್ರೆ ಬಿ.ಎಸ್ ಯಡಿಯೂರಪ್ಪ ಅವರ ಪಟ್ಟಿಯನ್ನು ಪಡೆದುಕೊಂಡ ಅಮಿತ್ ಶಾ, ‘ನೀವು ಹೊರಡಿ, ನಾವು ಅಂತಿಮ ಪಟ್ಟಿಯನ್ನು ನಾಳೆ ಕಳುಹಿಸಿ ಕೊಡ್ತೇವೆ’ ಎಂದು ಹೇಳಿ ಕಳುಹಿಸಿದ್ದಾರೆ. ಸಚಿವಾಕಾಂಕ್ಷಿಗಳ ಪಟ್ಟಿ ನೀಡಿರುವ ಯಡಿಯೂರಪ್ಪ, ತಾವು ನೀಡಿದ ಹೆಸರುಗಳ ಹಿನ್ನೆಲೆಯನ್ನೂ ತಿಳಿಸಿದ್ದಾರೆ. ಯಾವ ಕಾರಣಕ್ಕೆ ಮಂತ್ರಿ ಸ್ಥಾನ ನೀಡಬೇಕೆಂದು ಮಾಹಿತಿ ಕೊಟ್ಟಿದ್ದಾರೆ. ಪ್ರತಿಯೊಬ್ಬರ ಹಿನ್ನಲೆ ಮುನ್ನಲೆಯನ್ನೂ ಕೇಳಿಕೊಂಡ ಅಮಿತ್ ಶಾ, ‘ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆ ಮಾಡಿಕೊಳ್ಳಿ, ಪಟ್ಟಿ ಬರುತ್ತದೆ’ ಎಂದು ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಆ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಯಾರೆಲ್ಲಾ ಸಂಪುಟ ಸೇರ್ತಾರೆ ಅನ್ನೋದನ್ನು ನೋಡೋದಾದ್ರೆ..

ಹೆಸರು ಕ್ಷೇತ್ರ

ಆರ್.ಅಶೋಕ್ – ಪದ್ಮನಾಭನಗರ
ಎಸ್. ಸುರೇಶ್ ಕುಮಾರ್ – ರಾಜಾಜಿನಗರ
ಡಾ. ಸಿ.ಎನ್. ಅಶ್ವತ್ ನಾರಾಯಣ್ – ಮಲ್ಲೇಶ್ವರಂ
ಜೆ.ಸಿ. ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ
ಜಗದೀಶ್ ಶೆಟ್ಟರ್ – ಹುಬ್ಬಳ್ಳಿ – ಧಾರವಾಡ ಸೆಂಟ್ರಲ್
ಗೋವಿಂದ ಕಾರಜೋಳ – ಮುಧೋಳ
ಬಿ. ಶ್ರೀ ರಾಮುಲು – ಮೊಳಕಾಲ್ಮೂರು
ಕೆ.ಜಿ.ಬೋಪಯ್ಯ – ವಿರಾಜಪೇಟೆ
ಬಾಲಚಂದ್ರ ಜಾರಕಿಹೋಳಿ – ಅರಭಾವಿ
ಉಮೇಶ್ ಕತ್ತಿ – ಹುಕ್ಕೇರಿ
ಬಸವರಾಜ್ ಬೊಮ್ಮಾಯಿ – ಶಿಗ್ಗಾಂವಿ
ಸಿಟಿ ರವಿ – ಚಿಕ್ಕಮಗಳೂರು
ಬಸನಗೌಡ ಪಿ. ಯತ್ನಾಳ್ – ವಿಜಯಪುರ ನಗರ
ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ ನಗರ
ಎಸ್.ಅಂಗಾರ – ಸುಳ್ಯ.
ನಾಗೇಶ್ – ಮುಳಬಾಗಿಲು

ಇದು ಯಡಿಯೂರಪ್ಪ ಅವರು ಅಮಿತ್ ಶಾ ಅವರಿಗೆ ಸಲ್ಲಿಕೆ ಮಾಡಿರುವ ಪಟ್ಟಿ. ಅದರಲ್ಲಿ ಕನಿಷ್ಠ 15 ಮಂದಿಗೆ ಅವಕಾಶ ಕೊಡುವಂತೆ ಕೋರಿಕೊಂಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಅನ್ನೋದು ಅಮಿತ್ ಶಾ ಅವರ ನಡಾವಳಿಯಲ್ಲೇ ಗೊತ್ತಾಗ್ತಿದೆ.

Leave a Reply