ಯಡಿಯೂರಪ್ಪ ಎದೆಯಲ್ಲಿ ಶುರುವಾಗಿದೆ ಢವಢವ..? ಯಾಕೆ ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 25 ದಿನಗಳು ಕಳೆದು ಹೋಗಿವೆ. ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಮಂಗಳವಾರ ಮುಹೂರ್ತ ಫಿಕ್ಸ್ ಮಾಡಿದ್ದರೂ ಇಲ್ಲಿವರೆಗೂ ಸಿಎಂ ಕೈಗೆ ಸಚಿವರ ಪಟ್ಟಿ ಸಿಕ್ಕಿಲ್ಲ. ಹೀಗಾಗಿ ಯಡಿಯೂರಪ್ಪ ಅವರಿಗೆ ಟೆನ್ಷನ್ ಶುರುವಾಗಿದೆ.

ಸಚಿವಾಕಾಂಕ್ಷಿಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿದ್ದ ಬಿಎಸ್ ಯಡಿಯೂರಪ್ಪ ಬರಿಗೈಲಿ ವಾಪಸ್ ಆಗಿದ್ರು. ನಾವು ಪಟ್ಟಿಯನ್ನು ಅಂತಿಮ ಮಾಡಿ ಕಳುಹಿಸಿ ಕೊಡ್ತೇವೆ. ನೀವು ಬೆಂಗಳೂರಿಗೆ ವಾಪಸ್ ತೆರಳಿ ಎಂದಿದ್ದರು ಅಮಿತ್ ಶಾ. ಭಾನುವಾರ ಪಟ್ಟಿ ರವಾನೆ ಮಾಡ್ತೀವಿ ಎಂದಿದ್ದ ಬಿಜೆಪಿ ಹೈಕಮಾಂಡ್ ಸೋಮವಾರ ರಾತ್ರಿ ಆದರೂ ಪಟ್ಟಿ ನೀಡಿಲ್ಲ.

ಹೈಕಮಾಂಡ್ ನಾಯಕರು ಆರ್‌ಎಸ್‌ಎಸ್ ನಾಯಕ ಸಂತೋಷ್ ಮೂಲಕ ಪಟ್ಟಿ ರವಾನೆ ಮಾಡ್ತಿದ್ದಾರೆ ಅನ್ನೋದು ಯಡಿಯೂರಪ್ಪ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ಆಪ್ತರಿಗೆ ದೆಹಲಿಯಲ್ಲಿ ಸಂತೋಷ್ ಬ್ರೇಕ್ ಹಾಕಿದ್ದಾರೆ ಎನ್ನಲಾಗ್ತಿದೆ. ಇನ್ನು ಸಚಿವ ಸಂಪುಟ ವಿಸ್ತರಣೆ ಆಗ್ತಿದ್ದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೊರೆಯಲು ಸೂಚನೆ ಬಂದಿದೆ. ಅಧ್ಯಕ್ಷ ಸ್ಥಾನವನ್ನು ತನ್ನ ಆಪ್ತ ಅರವಿಂದ ಲಿಂಬಾವಳಿಗೆ ಕೊಡಿಸಲು ಭಾರೀ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರೂ ಹೆಜ್ಜೆ ಹೆಜ್ಜೆಗೂ ಬಿಜೆಪಿ ಹೈಕಮಾಂಡ್ ಕಂಟ್ರೋಲರ್ ಹಾಕ್ತಿರೋದು ಯಡಿಯೂರಪ್ಪ ಅಂಡ್ ಟೀಂಗೆ ಸಂಕಷ್ಟ ತಂದೊಡ್ಡಿದೆ.‌ ದೆಹಲಿಯಿಂದ ಸಂತೋಷ್ ಅವರಿಂದ ಸಚಿವರ ಪಟ್ಟಿ ಯಾವಾಗ ಬರುತ್ತೋ ಯಾರೆಲ್ಲಾ ಅಚ್ಚರಿಯ ಮುಖಗಳು ಬರುತ್ತವೋ..? ತನ್ನ ಆಪ್ತರಾದ ಎಲ್ಲಾ ಶಾಸಕರಿಗೂ ಹೈಕಮಾಂಡ್ ಗೇಟ್‌ಪಾಸ್ ಕೊಟ್ಟರೆ ಏನ್ ಮಾಡೋದು ಅನ್ನೋ ಚಿಂತೆಯಲ್ಲಿ‌ ಯಡಿಯೂರಪ್ಪ ಮುಳುಗಿದ್ದಾರೆ.

Leave a Reply