ಇನ್ಮುಂದೆ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಇಟ್ಟುಕೊಳ್ಳಲು ಆಗಲ್ಲ! ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಒಬ್ಬ ಪ್ರಜೆ ಒಂದು ಚುನಾವಣೆಯಲ್ಲಿ ಒಂದು ಬಾರಿ ಮತದಾನ ಮಾಡಲು ಮಾತ್ರ ಅವಕಾಶವಿದೆ. ಆದರೆ, ಅನೇಕರು ಒಂದಕ್ಕಿಂತ ಹೆಚ್ಚು ಮತದಾರ ಗುರುತಿನ ಚೀಟಿಯನ್ನು ಹೊಂದಿರುವುದು ಗೊತ್ತಿರುವ ವಿಚಾರ. ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಚುನಾವಣ ಆಯೋಗ ಮುಂದಾಗಿದೆ.

ಹೌದು, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಸಂಖ್ಯೆಯನ್ನು ಜೋಡಿಸಲು ಅವಕಾಶ ಮಾಡುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಮತದಾರ ಗುರುತಿನ ಚೀಟಿ ಹೊಂದುವುದನ್ನು ತಪ್ಪಿಸಲು ಇದು ಅನಿವಾರ್ಯ ಎಂದು ವಾದಿಸಿದೆ.

ಈಗಾಗಲೇ ಮತದಾರ ಗುರುತಿನ ಚೀಟಿಯನ್ನು ಆಧಾರ್ ಗೆ ಜೋಡಣೆ ಮಾಡುವ ಅವಕಾಶ ಇದೆ ಆದರೂ ಇದಕ್ಕೆ ಕಾನೂನಿನ ವ್ಯಾಪ್ತಿ ಇಲ್ಲ. ಈಗಾಗಿ ಪೂರ್ಣ ಪ್ರಮಾಣದಲ್ಲಿ ಜೋಡಣೆ ಸಾಧ್ಯವಾಗಿಲ್ಲ. ಆಧಾರ್ ಮಾಹಿತಿಯನ್ನು ಪಡೆಯಲು ನಿರ್ದಿಷ್ಟ ಕಾನೂನು ಇರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಜೋಡಣೆಗೆ ಪೂರ್ಣ ಪ್ರಮಾಣದಲ್ಲಿ ಮಾಡಲು ಚುನಾವಣಾ ಕಾನೂನಿನಲ್ಲಿ ಬದಲಾವಣೆ ತರಬೇಕಿದೆ ಎಂದು ಆಯೋಗವು ತನ್ನ ಪತ್ರದಲ್ಲಿ ವಿವರಿಸಿದೆ.

Leave a Reply