ಬಿಜೆಪಿಯಿಂದ ದ್ವೇಷದ ರಾಜಕಾರಣ; ಕನಕಪುರದಿಂದ ವೈದ್ಯಕೀಯ ಕಾಲೇಜು ಶಿಫ್ಟ್!

ಡಿಜಿಟಲ್ ಕನ್ನಡ ಟೀಮ್:

ನಾನು ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಲೇ ಅಧಿಕಾರಕ್ಕೆ ಏರಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾಡುತ್ತಿರೋದು ಮಾತ್ರ ದ್ವೇಷದ ರಾಜಕಾರಣವನ್ನೇ.

ಹೌದು, ಬಿಎಸ್ ವೈ ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದ ಎಲ್ಲ ಪ್ರಮುಖ ನಿರ್ಧಾರಗಳನ್ನು ರದ್ದುಗೊಳಿಸುವ ಮೂಲಕ ಆರಂಭವಾದ ದ್ವೇಷದ ರಾಜಕಾರಣ, ಈಗ ಕನಕಪುರಕ್ಕೆ ಸಿಗಬೆಕಿದ್ದ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡುವವರೆಗೂ ಮುಂದುವರಿದಿದೆ.

ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡಲಾಗಿತ್ತು. ಆದರ ಅಡಿಗಲ್ಲು ಹಾಕಿ ಕಾಮಗಾರಿ ಆರಂಭವಾಗುವ ಹೊತ್ತಲ್ಲಿ ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ದೋಸ್ತಿ ಸರ್ಕಾರ ಪತನಕ್ಕೆ ನೆರವಾಗಿದ್ದ ಸುಧಾಕರ್ ಗೆ ಕಾಣಿಕೆಯಾಗಿ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ.

ಎಲ್ಲೆಡೆ ನಾನು ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳಿಕೊಂಡು ಬರುವ ಬಿಎಸ್ ವೈ, ಅಧಿಕಾರಿಗಳ ವರ್ಗಾವಣೆ, ಟಿಪ್ಪು ಜಯಂತಿ ಆಚರಣೆ ರದ್ದು, ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಕತ್ತರಿ… ಹೀಗೆ ಬಿಎಸ್ ವೈ ತಮ್ಮ ಮಾತನ್ನು ತಪ್ಪಿದ್ದಾರೆ.

Leave a Reply