ನಳಿನ್ ಕುಮಾರ್ ಕಟೀಲ್ ಹೆಗಲಿಗೆ ರಾಜ್ಯ ಬಿಜೆಪಿ ಸಾರಥ್ಯ! ಅಚ್ಚರಿ ಆಯ್ಕೆ ಯಾಕೆ?

ಡಿಜಿಟಲ್ ಕನ್ನಡ ಟೀಮ್:

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಬಿಜೆಪಿ ಹೈ ಕಮಾಂಡ್ ಸೂಚನೆ ನೀಡಿದೆ.

ಯಡಿಯೂರಪ್ಪ ಸಿಎಂ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಬಿಎಸ್ ವೈ ಆಪ್ತ ಅರವಿಂದ ಲಿಂಬಾವಳಿ, ಆರ್.ಅಶೋಕ್ ಹಾಗೂ ಸಿ.ಟಿ ರವಿ ಅವರ ಹೆಸರು ಕೇಳಿ ಬಂದಿತ್ತು. ಆದರೆ ಇವರೆಲ್ಲರ ಹೊರತಾಗಿ ಕಟೀಲ್ ಅವರು ಅಧ್ಯಕ್ಷರಾಗಿರೋದು ಅಚ್ಚರಿ ಮೂಡಿಸಿದೆ.

ಈ ಅಚ್ಚರಿ ಆಯ್ಕೆಗೆ ಕಾರಣ ಏನಿರಬಹುದು ಎಂಬುದನ್ನು ನೋಡುವುದಾದರೆ ಕಟೀಲ್ ಅವರು ಆರ್ ಎಸ್ಎಸ್ ಹಿನ್ನಲೆ ಹೊಂದಿದ್ದಾರೆ. ಇನ್ನು ಈ ಬಾರಿ ಸಚಿವ ಸಂಪುಟದಲ್ಲಿ ಆರ್. ಅಶೋಕ್ ಮತ್ತು ಸಿ.ಟಿ ರವಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ದಕ್ಷಿಣ ಕನ್ನಡಕ್ಕೆ ಯಾವುದೇ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಕಟೀಲ್ ಅವರಿಗೆ ಪಕ್ಷದ ಸಾರಥ್ಯ ನೀಡಲಾಗಿದೆ.

ಇನ್ನು ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದ ಅರವಿಂದ ಲಿಂಬಾವಳಿಗೆ ಸಚಿವ ಸಂಪುಟದಲ್ಲೂ ಸ್ಥಾನ ಇಲ್ಲ, ಅಧ್ಯಕ್ಷ ಹುದ್ದೆಯೂ ಇಲ್ಲದಂತಾಗಿದೆ.

Leave a Reply