ಡಿಜಿಟಲ್ ಕನ್ನಡ ಟೀಮ್:
ಪಕ್ಷೇತರ ಶಾಸಕ ಹೆಚ್.ನಾಗೇಶ್ ಸೇರಿದಂತೆ ಒಟ್ಟು 17 ಶಾಸಕರು ಮಂಗಳವಾರ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೆಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಸೇರಿದಂತೆ ಹಿರಿಯ ನಾಯಕರು ಹಾಗೂ ಅಶ್ವಥ್ ನಾರಾಯಣ್, ಶಶಿಕಲಾ ಜೊಲ್ಲೆ, ಮಾಧುಸ್ವಾಮಿ ಸೇರಿದಂತೆ ಕಿರಿಯ ನಾಯಕರು ಸಚಿವರಾಗಿದ್ದಾರೆ. ಸರ್ಕಾರ ರಚನೆ ಆಗಿ 25 ದಿನಗಳ ನಂತರ ಸಂಪುಟ ರಚನೆ ಕುರಿತ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈಗ ಯಾರಿಗೆ ಯಾವ ಖಾತೆ ಹಂಚಿಕೆಯಾಗುತ್ತದೆ ಎಂಬ ಕುತೂಹಲ ಮೂಡಿಸಿದೆ.
ಇನ್ನು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ರೇಣುಕಾಚಾರ್ಯ, ಸಿಪಿ ಯೋಗೇಶ್ವರ್, ಮುರುಗೇಶ್ ನಿರಾಣಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಶಾಸಕರಿಗೆ ನಿರಾಸೆಯಾಗಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾದರು. ಗೈರಾಗಿರುವ ನಾಯಕರು ಬಂಡಾಯ ಬಾವುಟ ಹಾರಿಸುತ್ತಾರಾ ಅಥವಾ ಬಿಜೆಪಿ ಹೈಕಮಾಂಡ್ ಅನ್ನು ಎದುರಿಸಲು ಅವರಿಂದ ಸಾಧ್ಯವೇ ಎಂಬ ಕುತೂಹಲ ಮೂಡಿದೆ.