ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದ 200 ಮಾಜಿ ಸಂಸದರಿಗೆ ಗೆಟ್ ಔಟ್ ಎಂದ ಕೇಂದ್ರ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಲೋಕಸಭೆ ವಿಸರ್ಜನೆ ಆಗಿ ಹೊಸ ಸರ್ಕಾರ ಬಂದು ಮೂರು ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಅನೇಕ ಮಾಜಿ ಸಂಸದರು ದೆಹಲಿಯ ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದರು. ಇವರೆಲ್ಲರಿಗೂ ಈಗ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿ 7 ದಿನಗಳಲ್ಲಿ ಬಂಗಲೆ ಖಾಲಿ ಮಾಡಿ ಎಂದು ನಿರ್ದೇಶನ ನೀಡಿದೆ.

ಮೇ.25 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ 16 ನೇ ಲೋಕಸಭೆಯನ್ನು ವಿಸರ್ಜಿಸಿದ್ದರು. ತಮ್ಮ ಅವಧಿ ಮುಗಿದರೂ 200ಕ್ಕೂ ಹೆಚ್ಚು ಮಾಜಿ ಸಂಸದರು ಬಂಗಲೆಯಿಂದ ಹೊರ ಹೋಗಿಲ್ಲ. ಹೀಗಾಗಿ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ.

ಲೋಕಸಭೆಯ ಹೌಸಿಂಗ್ ಸಮಿತಿಯ ಅಧ್ಯಕ್ಷ ಸಿಆರ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಾಜಿ ಸಂಸದರು ವಾಸಿಸುತ್ತಿರುವ ಸರ್ಕಾರಿ ಬಂಗಲೆಗಳಲ್ಲಿ ಇನ್ನು 3 ದಿನಗಳಲ್ಲಿ ವಿದ್ಯುತ್, ನೀರಿನ ಸರಬರಾಜು, ಗ್ಯಾಸ್ ಸಂಪರ್ಕ ಎಲ್ಲವನ್ನೂ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

Leave a Reply