ಹೈಕಮಾಂಡ್ ನಿಂದ ಬಂತು ಸಚಿವರ ಲಿಸ್ಟ್! ಯಾರಿಗೆಲ್ಲಾ ಸಿಗುತ್ತೆ ಸಚಿವ ಸ್ಥಾನ?

ಡಿಜಿಟಲ್ ಕನ್ನಡ ಟೀಮ್:

ಸೋಮವಾರ ತಡ ರಾತ್ರಿ ಬಿಜೆಪಿ ಹೈಕಮಾಂಡ್ ನಿಂದ ಸಿಎಂ ಯಡಿಯೂರಪ್ಪ ಅವರಿಗೆ ಸಂಪುಟ ಸಚಿವರ ಪಟ್ಟಿ ರವಾನೆಯಾಗಿದೆ. ಸರ್ಕಾರ ಬಂದ 25 ಬಳಿಕ ಕೊನೆಗೂ ಸಂಪುಟ ರಚನೆ ಆಗ್ತಿದೆ. ಕಳೆದ ಶನಿವಾರ ಯಡಿಯೂರಪ್ಪ ಹೈಕಮಾಂಡ್ ಭೇಟಿ ಮಾಡಿ ಪಟ್ಟಿಯೊಂದನ್ನು ಕೊಟ್ಟು ಬಂದಿದ್ರು. ಇದೀಗ ಹೈಕಮಾಂಡ್ ಅಧಿಕೃತವಾಗಿ ಸಚಿವ ಸಂಪುಟ ಸೇರುವ ಶಾಸಕರ ಹೆಸರನ್ನು ಕಳುಹಿಸಿಕೊಟ್ಟಿದ್ದು, ತಡರಾತ್ರಿಯಿಂದ ಬಿಎಸ್ ಯಡಿಯೂರಪ್ಪ ಕರೆ ಮಾಡಿ ಸಂಪುಟ ಸೇರಲು ಆಹ್ವಾನ ಕೊಡ್ತಿದ್ದಾರೆ. ಜೊತೆಗೆ ಸಂಪುಟ ಸೇರುತ್ತಿರುವ ನಾಯಕರನ್ನು ಅಭಿನಂದಿಸುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಯಾರೆಲ್ಲಾ ಮಂತ್ರಿ ಆಗುತ್ತಿರುವವರು ಯಾರು? ಸಂಪುಟದಲ್ಲಿನ ಕಾಸ್ಟ್ ಕೆಮಿಸ್ಟ್ರಿ ಹೀಗಿದೆ ನೋಡಿ….

ಏಳು ಲಿಂಗಾಯತರು

 1. ಲಕ್ಷ್ಮಣ್ ಸವದಿ
 2. ಜಗದೀಶ್ ಶೆಟ್ಟರ್
 3. ವಿ. ಸೋಮಣ್ಣ
 4. ಬಸವರಾಜ್ ಬೊಮ್ಮಾಯಿ
 5. ಜೆ.ಸಿ. ಮಾಧುಸ್ವಾಮಿ
 6. ಸಿ.ಸಿ. ಪಾಟೀಲ್
 7. ಶಶಿಕಲಾ ಜೊಲ್ಲೆ

ಮೂವರು ಒಕ್ಕಲಿಗರು

 1. ಆರ್. ಅಶೋಕ್
 2. ಡಾ. ಅಶ್ವತ್ಥ ನಾರಾಯಣ
 3. ಸಿ.ಟಿ.ರವಿ

ಎಸ್‌ಸಿ, ಎಸ್‌ಟಿ ನಾಲ್ವರು

 1. ಶ್ರೀರಾಮುಲು
 2. ಗೋವಿಂದ ಕಾರಜೋಳ
 3. ನಾಗೇಶ್
 4. ಪ್ರಭು ಚೌವ್ಹಾಣ್

ಇಬ್ಬರು ಹಿಂದುಳಿದ ವರ್ಗ

 1. ಎಸ್.ಈಶ್ವರಪ್ಪ
 2. ಕೋಟಾ ಶ್ರೀನಿವಾಸ್ ಪೂಜಾರಿ

ಓರ್ವ ಬ್ರಾಹ್ಮಣ

17. ಸುರೇಶ್ ಕುಮಾರ್

Leave a Reply