ತಾವೇ ಉದ್ಘಾಟಿಸಿದ ಸಿಬಿಐ ಕಚೇರಿಯಲ್ಲೇ ವಿಚಾರಣೆಗೆ ಒಳಪಡಲಿದ್ದಾರೆ ಚಿದಂಬರಂ..!

ಡಿಜಿಟಲ್ ಕನ್ನಡ ಟೀಮ್:

INX ಮೀಡಿಯಾ ಹಗರಣದಲ್ಲಿ ಬಂಧಿತನಾಗಿರುವ ಕೇಂದ್ರದ ಮಾಜಿ ಹಣಕಾಸು ಹಾಗೂ ಮಾಜಿ ಗೃಹ ಸಚಿವ ಪಿ.ಚಿದಂಬರಂರನ್ನು ನಾಲ್ಕು ದಿನಗಳ ಕಾಲ ಸಿಬಿಐ ಅಧಿಕಾರಿಗಳ ಕಸ್ಟಡಿಗೆ ಕೊಡಲಾಗಿದೆ. ವಿಶೇಷ ಅಂದ್ರೆ ಎರಡನೇ ಯುಪಿಎ ಅಧಿಕಾರ ಅವಧಿಯಲ್ಲಿ ಈ ಸಿಬಿಐ ಮುಖ್ಯ ಕಚೇರಿ ನಿರ್ಮಾಣ ಮಾಡಲಾಗಿತ್ತು. ಸಿಬಿಐಗೆ ಕೇಂದ್ರ ಗೃಹ ಸಚಿವರೇ ಮುಖ್ಯಸ್ಥರಾಗಿ ಇರುವ ಕಾರಣ ಅಂದಿನ ಗೃಹ ಸಚಿವರಾಗಿದ್ದ ಚಿದಂಬರಂ ನಿರ್ಮಾಣದ ರೂವಾರಿ ಎಂದರೆ ತಪ್ಪಲ್ಲ. ಉದ್ಘಾಟನಾ ಕಾರ್ಯಕ್ರಮದಲ್ಲೂ ಪಿ. ಚಿದಂಬರಂ ಮುಖ್ಯ ಅತಿಥಿ ಆಗಿದ್ದರು. ಇದೀಗ ಸಿಬಿಐ ವಿಶೇಷ ಕೋರ್ಟ್ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಟ್ಟಿರುವುದರಿಂದ ತಾನೂ ಗೃಹ ಸಚಿವನಾಗಿದ್ದ ಕಟ್ಟದಲ್ಲೇ ಆರೋಪಿಯಾಗಿ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ನಿನ್ನೆ ರಾತ್ರಿ ಹೈಡ್ರಾಮ ನಡೆಸಿ ಬಂಧಿಸಿದ ಬಳಿಕ ರಾತ್ರಿ ವೈದ್ಯಕೀಯ ಪರೀಕ್ಷೆ ಬಳಿಕ ಮಲಗಲು ವ್ಯವಸ್ಥೆ ಮಾಡಲಾಯ್ತು. ಬೆಳಗ್ಗೆ ವಿಚಾರಣೆ ಶುರು ಮಾಡಿದ ಸಿಬಿಐ ಅಧಿಕಾರಿಗಳು, ಐಎನ್‌ಎಕ್ಸ್ ಮೀಡಿಯಾ ಹಗರಣದ ಬಗ್ಗೆ ವಿಚಾರಣೆ ನಡೆಸಿದ್ರು. ಒಂದೊಂದೇ ಪ್ರಶ್ನೆ ಎದುರಾಗ್ತಿದ್ದ ಹಾಗೆ ಸೌಮ್ಯವಾಗಿಯೇ ಇದ್ದ ಚಿದಂಬರಂ, ತನಿಖಾಧಿಕಾರಿಯನ್ನೇ ಹೆಣಗಾಡಿಸಿದ್ರು.

1. ನೀವು ಐಎನ್‌ಎಕ್ಸ್ ಕಂಪನಿಗೆ ಹೇಗೆ 100 ಪರ್ಸೆಂಟ್ ಫಾರಿನ್ ಇನ್ವೆಸ್ಟ್‌ಮೆಂಟ್‌ಗೆ ಹೇಗೆ ಅವಕಾಶ ಕೊಟ್ರಿ..?

2. ವಿದೇಶದಲ್ಲಿ ಇರುವ ನಕಲಿ ಕಂಪನಿಗೆ ಹಣ ಹೂಡಿಕೆ ಹೇಗೆ ಮಾಡಿದ್ರಿ..?

3. ಐಎನ್‌ಎಕ್ಸ್ ಡೀಲ್‌ನಿಂದ ಬಂದ ಹಣವನ್ನು ಏನೇನು ಮಾಡಿದ್ರಿ..?

4. ಈ ಹಗರಣದಲ್ಲಿ ನಿಮ್ಮ ಜೊತೆ ಇನ್ನು ಯಾರೆಲ್ಲಾ ಕೈ ಜೋಡಿಸಿದ್ದಾರೆ..?

5. ನಿಮ್ಮ ಅಕ್ರಮ ವಹಿವಾಟಿನ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಮಗನಿಗಾಗಿ ಅಕ್ರಮಕ್ಕೆ ಜೋಡಿಸಿದ್ರಾ..?

ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿದರೂ ಮಾಜಿ ಕೇಂದ್ರ ಸಚಿವ ಸ್ಪಷ್ಟವಾದ ಉತ್ತರ ನೀಡಲು ನಿರಾಕರಿಸಿದರು. ಹಿರಿಯ ವಕೀಲರಾಗಿರುವ ಚಿದಂಬರಂ, ನಿಮ್ಮೆಲ್ಲಾ ಪ್ರಶ್ನೆಗಳಿಗೂ ಕೋರ್ಟ್‌ನಲ್ಲೇ ಉತ್ತರ ಕೊಡ್ತೇನೆ ಎಂದು ನೇರವಾಗಿಯೇ ಹೇಳಿದರು ಎನ್ನಲಾಗಿದೆ

ಮಧ್ಯಾಹ್ನದ ವಿಶೇಷ ಸಿಬಿಐ ಕೋರ್ಟ್‌ಗೆ ಹಾಜರು ಮಾಡಲಾಯ್ತು. ಚಿದಂಬರಂ ಪರ ವಕಾಲತ್ತು ವಹಿಸಲು ಘಟಾನುಘಟಿ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖರ್ಷಿದ್ ಸೇರಿದಂತೆ ಕಾನೂನು ಪಂಡಿತರ ದಂಡೇ ನೆರೆದಿತ್ತು. ಆದರೆ ಅದೆಲ್ಲಾ ಮುಗಿಯುತ್ತಿದ್ದಂತೆ ಪಿ. ಚಿದಂಬರಂ ಕೋರ್ಟ್‌ನಲ್ಲಿ ನನಗೆ ಮಾತನಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಪಿ. ಚಿದಂಬರಂ ಮನವಿಗೆ ವಿರೋಧ ವ್ಯಕ್ತಪಡಿಸಿದ ಸಾಲಿಸಿಟರಲ್ ಜನರಲ್, ಆರೋಪಿ ಸ್ಥಾನದಲ್ಲಿರುವ ಚಿದಂಬರಂ ಅವರಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು. ಆದರೆ ಕೋರ್ಟ್ ಮಾತನಾಡಲು ಅನುಮತಿ ನೀಡಿತು. ತಮ್ಮ ಪರವಾಗಿ ತಾವೇ ವಾದ ಮಂಡನೆ ಮಾಡಲು ಶುರು ಮಾಡಿದ ಚಿದಂಬರಂ, ನಾನು ವಿದೇಶದಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ನನ್ನ ಮಗ ಕಾರ್ತಿ ಚಿದಂಬರಂ ವಿದೇಶದಲ್ಲಿ ಅಕೌಂಟ್ ಹೊಂದಿದ್ದಾನೆ. ಅಕೌಂಟ್ ಹೊಂದುವ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅನುಮತಿ ಪಡೆದಿದ್ದಾನೆ. ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ನ್ಯಾಯಾಧೀಶರ ಎದುರು ತಿಳಿಸಿದ್ರು. ಬಳಿಕ ಕೋರ್ಟ್ ಸ್ವಲ್ಪ ಕಾಲಾವಕಾಶದ ಬಳಿಕ ಮತ್ತೆ ಕೋರ್ಟ್ ತೆರೆಯಿತು. ಆ ಬಳಿಕ ಸೋಮವಾರದ ತನಕ ಕಸ್ಟಡಿ ಕೊಡುವ ನಿರ್ಧಾರ ಪ್ರಕಟ ಮಾಡ್ತು. ಇದೀಗ ನಾಲ್ಕು ದಿನಗಳ ಕಾಲ ಸಿಬಿಐ ಪೊಲೀಸರ ವಶಕ್ಕೆ ಹೋಗಿದ್ದಾರೆ.

Leave a Reply