ಸುಲಭವಾಗಿ ಸೋಲು ಒಪ್ಪಿಕೊಳ್ಳಲ್ಲ ಅಂತಿದ್ದಾನೆ ಪೈಲ್ವಾನ!

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನಲ್ಲಿ ಆಕಾಶದೆತ್ತರಕ್ಕೆ ಕ್ರೇಜ್ ಹುಟ್ಟಿಸಿರೋ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರೋ ಈ ಚಿತ್ರದ ಟ್ರೈಲರ್ ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ಅಷ್ಟೂ ಭಾಷೆಗಳಲ್ಲೂ ಬಿಡುಗಡೆಯಾಗಿದೆ.

‘ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ.’ ‘ನಾನು ಗೆಲ್ತೀನೋ ಗೋಲ್ಲಲ್ವೋ ಗೊತ್ತಿಲ್ಲ. ಆದರೆ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳೋಲ್ಲ.’ ಹೀಗೆ ಪಂಚಿಂಗ್ ಡೈಲಾಗ್ ಗಳು ಟ್ರೈಲರ್ ನ ಹೈಲೇಟ್ ಆಗಿವೆ. ಬೀದಿಯಲ್ಲಿ ಹೊಡೆದಾಡುವ ನಾಯಕ ಕಿಚ್ಚ, ತನ್ನ ಗುರುವಿನ ಬಳಿ ಕುಸ್ತಿ ಕಲಿಯುತ್ತಾನೆ. ಬಡತನ, ಕಷ್ದಟದ ಹಾದಿ ಮೆಟ್ಲ್ಲಿಟಿ ನಿಂತು ಬಲವಾದ ಕಾರಣಕ್ಕೆ ಈ ಪೈಲ್ವಾನ ಅಖಾಡಕ್ಕೀಳಿತಿದ್ದಾನೆ ಅನ್ನೋದು ಟ್ರೈಲರ್ ಹೇಳುತ್ತಿದೆ. ಒಟ್ಟಿನಲ್ಲಿ ತೆರೆಯ ಅಖಾಡದಲ್ಲಿ ಪೈಲ್ವಾನನ ಪಟ್ಟು ನೋಡಲು ಅಭಿಮಾನಿಗಳು ಕಾತುರರಾಗಿದ್ದು, ಈ ಟ್ರೇಲರ್ ಅವರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ.

Leave a Reply