ಚಿರಂಜೀವಿ ಜತೆ ಡ್ಯಾನ್ಸ್; ಅಪಪ್ರಚಾರಕ್ಕೆ ತಿರುಗೇಟು ಕೊಟ್ಟ ಸುಮಲತಾ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧದ ಅಪಪ್ರಚಾರಕ್ಕೆ ಸಂಸದೆ ಸುಮಲತಾ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ.

ತೆಲುಗು ಚಿತ್ರರಂಗದ ಮೆಘಾ ಸ್ಟಾರ್ ಚಿರಂಜೀವಿ ಜತೆ ಡ್ಯಾನ್ಸ್ ಮಾಡಿದ ತುಣುಕು ಸಾಕಷ್ಟು ವೈರಲ್ ಆಗಿದ್ದು, ‘ಸಂಸದೆ ಸುಮಲತಾ ಅವರು ಆಂಧ್ರದಲ್ಲಿ ಪ್ರವಾಹ ಸಂತ್ರಸ್ತರಿಗೆ ಸಾಂತ್ವಾನ ಹೇಳುತ್ತಿದ್ದಾರೆ’ ಎಂದು ಲೇವಡಿ ಮಾಡಿ ಅಪಪ್ರಚಾರ ಮಾಡಲಾಗುತ್ತಿತ್ತು.

ಆದರೆ ಇದು ಹಳೇ ವೀಡಿಯೊ ಎಂದು ಫೋಟೋ ಸಮೇತ ಸಾಬೀತುಪಡಿಸಿದ್ದಾರೆ. ನಾಲ್ಕು ವರ್ಷದ ಹಿಂದೆ ಚಿರಂಜೀವಿ ಅವರ ಮಗಳ ಮದುವೆ ಸಂದರ್ಭದಲ್ಲಿ ಮಾಡಿದ ಡ್ಯಾನ್ಸ್ ವೀಡಿಯೊ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಅಂಬರೀಶ್ ಹಾಗೂ ಚಿರಂಜೀವಿ ಕುಟುಂಬದ ಜತೆಗಿನ ಫೋಟೋ ಹಾಕಿ ಹಳೆಯ ಸವಿ ನೆನಪು ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿ ಅಪಪ್ರಚಾರ ಮಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ.

Leave a Reply