ರಾಜ್ಯ ಬಿಜೆಪಿ ಯಶಸ್ಸಿಗೆ ಜೇಟ್ಲಿ ಕೊಡುಗೆ ಅಪಾರ!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಜೇಟ್ಲಿ ಪಾತ್ರ ಪ್ರಮುಖ. 2004ರಲ್ಲಿ ಕರ್ನಾಟಕ ಲೋಕಸಭೆ ಚುನಾವಣೆ ಹೊಣೆ ಜೇಟ್ಲಿ ಅವರಿಗೆ ನೀಡಲಾಗಿತ್ತು. ಆ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ವೇಗವಾಗಿ ಬೆಳೆದಿದೆ.

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 83 ಸ್ಥಾನ ಪಡೆಯಲೂ ಜೇಟ್ಲಿ ತಂತ್ರ ಕಾರಣ. 2008ರ ಕರ್ನಾಟಕ ವಿಧಾನಸಭೆ ಚುನಾವಣೆ ಹೊಣೆ ಕೂಡ ಜೇಟ್ಲಿ ಹೆಗಲಿದೆ
ಆಗ ಕರ್ನಾಟಕದಲ್ಲಿ 110 ವಿಧಾನಸಭಾ ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೇರಿತ್ತು. 2008ರಲ್ಲಿ ಐವರು ಸ್ವತಂತ್ರ ಶಾಸಕರ ಬೆಂಬಲ ಪಡೆಯುವಲ್ಲಿ ಜೇಟ್ಲಿ ಪ್ರಮುಖ ಪಾತ್ರ

ಅದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯು 18 ಸ್ಥಾನಗಳನ್ನು ಗೆದ್ದುಕೊಂಡಿತು. ರಾಜ್ಯದ 224 ಕ್ಷೇತ್ರಗಳ ಪೈಕಿ 83 ಸ್ಥಾನಗಳನ್ನು ಪಡೆದುಕೊಂಡು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಗ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 68 ಹಾಗೂ ಜನತಾ ದಳ (ಸೆಕ್ಯುಲರ್) 59 ಸ್ಥಾನಗಳನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ ಹಾಗೂ ಜೆಡಿ(ಎಸ್) ಮೈತ್ರಿಕೂಟ ರಚಿಸಿ ಕಾಂಗ್ರೆಸ್‌ನ ಧರಂ ಸಿಂಗ್ ಮುಖ್ಯಮಂತ್ರಿಯಾದರು.

2007ರ ನವೆಂಬರ್ ನಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಯ ಬಿ. ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದರು. ಮೇ 2008ರಲ್ಲಿ, ಅರುಣ್ ಜೇಟ್ಲಿಯವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುವಂತಹ ಜವಾಬ್ಧಾರಿ ತೆಗೆದುಕೊಂಡರು. 224-ಸದಸ್ಯರ ವಿಧಾನಸಭೆಯಲ್ಲಿ, ಬಿಜೆಪಿಯು 110 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಸಾಧಿಸಲು 3 ಸ್ಥಾನಗಳು ಕಡಿಮೆಯಾದವು. ಆ ನಂತರ, ಅರುಣ್ ಜೇಟ್ಲಿಯವರು 5 ಜನ ಪಕ್ಷೀತರ ಶಾಸಕರ ಬೆಂಬಲ ಯಾಚಿಸಿ ಬಿಜೆಪಿಯ ಬಲವನ್ನು 115 ಸ್ಥಾನಗಳಿಗೆ ತಂದರು. ಪಕ್ಷದ ಅಧ್ಯಕ್ಷ ರಣಜಿತ್ ಸಿಂಗ್ರವರಿಂದ ಹಿಡಿದು ಸಹೋದ್ಯೋಗಿ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪನವರವರೆಗೆ ಪಕ್ಷದ ಎಲ್ಲಾ ನಾಯಕರುಗಳು ಈ ಗೆಲುವಿನ ರೂವಾರಿ ಅರುಣ್ ಜೇಟ್ಲಿ ಎಂದು ಹೇಳಿದರು.

Leave a Reply