ಬಿಜೆಪಿಯ ಧ್ವನಿಯಾಗಿದ್ದ ಜೇಟ್ಲಿ ಹಾದಿ ಹೇಗಿತ್ತು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿಯ ಆಪ್ತ ಸಚಿವ ಮತ್ತು ಸ್ನೇಹಿತ ಅರುಣ್ ಜೇಟ್ಲಿ ಇಂದು ವಿಧಿವಶರಾಗಿದ್ದಾರೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಗಟ್ಟಿ ಧ್ವನಿ ಅರುಣ್ ಜೇಟ್ಲಿ, ಸರ್ಕಾರದ ಚಾಣಕ್ಯರಲ್ಲಿ ಒಬ್ಬರು. ಅನಾರೋಗ್ಯದ ಕಾರಣ ಕಳೆದ ಲೋಕಸಭೆಗೆ ಸ್ಪರ್ಧಿಸಿರಲಿಲ್ಲ. ಜೇಟ್ಲಿ ಅವರ ಜೀವನದ ಹಾದಿ ನೋಡುವುದಾದರೆ…

ಜೇಟ್ಲಿ ಕುಟುಂಬ ಹಿನ್ನೆಲೆ…

 • ಡಿಸೆಂಬರ್ 28, 1952ರಲ್ಲಿ ನವದೆಹಲಿಯಲ್ಲಿ ಜನನ.
 • ಮೇ 24, 1982ರಲ್ಲಿ ಸಂಗೀತಾ ಜೊತೆ ವಿವಾಹ. ಇಬ್ಬರು ಮಕ್ಕಳು, ಮಗ ರೋಹನ್, ಮಗಳು ಸೊನಾಲಿ
  ಮಗಳು ಸೊನಾಲಿ ಜೇಟ್ಲಿ ಕೂಡ ವಕೀಲೆ, ಬಿಜೆಪಿಯ ಸದಸ್ಯೆ.
 • ನವದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ. ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್​ನಲ್ಲಿ ವಾಣಿಜ್ಯ ಪದವಿ. ದೆಹಲಿ ವಿವಿಯ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿ.

ರಾಜಕೀಯ ಆರಂಭ…

 • ವಿದ್ಯಾರ್ಥಿ ಸಂಘದ ನಾಯಕನಾಗಿ ರಾಜಕೀಯ ವೃತ್ತಿಜೀವನ ಆರಂಭ.
  1974ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ.
  70ರ ದಶಕದಲ್ಲಿ ದೆಹಲಿ ವಿವಿಯಲ್ಲಿ ಎಬಿವಿಪಿ ನಾಯಕನಾಗಿ ಸಕ್ರಿಯ.
  1973ರಲ್ಲಿ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಹೋರಾಟ.
  ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ
  ತುರ್ತು ಪರಿಸ್ಥಿತಿ ವೇಳೆ 19 ತಿಂಗಳು ಸೆರೆವಾಸ.ಜೈಲಿನಿಂದ ಹೊರಬಂದು ಜನಸಂಘ ಸೇರಿದ್ದ ಜೇಟ್ಲಿ.
 • 1999ರ ಚುನಾವಣೆ ವೇಳೆ ಬಿಜೆಪಿ ವಕ್ತಾರ.
 • ವಾಜಪೇಯಿ ಸರ್ಕಾರದಲ್ಲಿ ಮಾಹಿತಿ & ಪ್ರಸಾರ ಖಾತೆ ರಾಜ್ಯ ಸಚಿವರಾಗಿ ಸೇವೆ. ಬಂಡವಾಳಹರಣ ರಾಜ್ಯಸಚಿವರಾಗಿ ಸೇವೆ.(ಹೊಸ ಮಂತ್ರಿಮಂಡಲವು ಮೊದಲಬಾರಿಗೆ ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ (ಡಬ್ಲುಟಿಒ) ಆಳ್ವಿಕೆಯಡಿಯಲ್ಲಿ ಬಂಡವಾಳಹರಣ ನಿಯಮಕ್ಕೆ ಮಂತ್ರಿ ಪದವಿಯನ್ನು ನಿರ್ಮಿಸಿತು)
 • 2000ರಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆ. ಕಾನೂನು, ನ್ಯಾಯಾಂಗ & ಕಂಪನಿ ವ್ಯವಹಾರಗಳು & ಶಿಪ್ಪಿಂಗ್ ಸಚಿವರಾಗಿ ಸೇವೆ. (ಸಾರಿಗೆ ವಿಧಾನಗಳಿಂದ ಮಂತ್ರಿ ಪದವಿಯ ವಿಂಗಡಣೆಯಾದ ಮೇಲೆ ಮೊದಲಬಾರಿಗೆ ಶಿಪ್ಪಿಂಗ್ ಮಂತ್ರಿ ಪದವಿಯು ಇವರಿಗೆ ಲಭಿಸಿತು).
 • 2002ರಲ್ಲಿ ಎಲ್ಲಾ ಸಚಿವ ಸ್ಥಾನ ತೊರೆದು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ. ಪ್ರಧಾನ ಕಾರ್ಯದರ್ಶಿ ಜೊತೆ ರಾಷ್ಟ್ರೀಯ ವಕ್ತಾರರಾಗಿ ಸೇವೆ.
 • 2003ರಲ್ಲಿ ಮತ್ತೆ ಸಚಿವರಾದ ಅರುಣ್ ಜೇಟ್ಲಿ
  ವಾಣಿಜ್ಯ & ಕೈಗಾರಿಕೆ ಹಾಗೂ ಕಾನೂನು & ನ್ಯಾಯಾಂಗ ಖಾತೆ ನಿರ್ವಹಣೆ.
 • ೨೦೦೪ರಲ್ಲಿ ಮತ್ತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನ.
 • ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ. ರಾಜಕೀಯದ ಜೊತೆ ಕಾನೂನು ವೃತ್ತಿ ಮುಂದುವರಿಕೆ

ವಕೀಲರಾಗಿ ಜೇಟ್ಲಿ…

 • 1977ರಿಂದ ವಕೀಲ ವೃತ್ತಿಯಲ್ಲಿ ಸಕ್ರಿಯ. ದೇಶದ ಹಲವು ಹೈಕೋರ್ಟ್‌ಗಳಲ್ಲಿ, ಸುಪ್ರೀಂ ಕೋರ್ಟ್​ನಲ್ಲಿ ವಕೀಲ ವೃತ್ತಿ.
 • 1989ರ ವಿ.ಪಿ ಸಿಂಗ್ ಸರ್ಕಾರದಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ಸೇವೆ.
 • ಬೋಫೋರ್ಸ್ ಹಗರಣ ಬಯಲು ಮಾಡುವಲ್ಲಿ ಪ್ರಮುಖ ಪಾತ್ರ.
 • ಜೆಡಿಯುನ ಶರದ್ ಯಾದವ್, ಕಾಂಗ್ರೆಸ್​ನ ಮಾಧವರಾವ್ ಸಿಂಧ್ಯಾ, ಬಿಜೆಪಿಯ ಅಡ್ವಾಣಿ ಕೂಡ ಇವರ ಕಕ್ಷಿದಾರರು.
 • ಕಾನೂನು & ಪ್ರಸಕ್ತ ವ್ಯವಹಾರಗಳ ಬಗ್ಗೆ ಹಲವು ಲೇಖನ

Leave a Reply