ಕಾಫಿ ಡೇ ಮಾಲೀಕ ಸಿದ್ದಾರ್ಥ್ ತಂದೆ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಕೆಫೆ ಕಾಫಿ ಡೇ ಸಂಸ್ಥಾಪಕ, ಇತ್ತೀಚಿಗೆ ಆತ್ಮಹತ್ಯೆಗೆ ಶರಣಾಗಿದ್ದ ವಿಜಿ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ (96) ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಗಯ್ಯ ಹೆಗ್ಡೆ ಕೋಮಾಗೆ ಜಾರಿದ್ದರು. ಪುತ್ರನ ಸಾವಿನ ಸುದ್ದಿ ಸಹ ಅವರಿಗೆ ತಿಳಿದಿರಲಿಲ್ಲ.

ಸಿದ್ದಾರ್ಥ್ ಮೃತಪಟ್ಟು ತಿಂಗಳಾಗುವುದರಲ್ಲಿ ತಂದೆ ಕೂಡ ಇಹಲೋಕ ತೊರೆದಿರುವುದು ಕುಟುಂಬದಲ್ಲಿ ನೋವು ಮಡುಗಟ್ಟಿದೆ.

Leave a Reply