ಡಿಸಿಎಂ ಹುದ್ದೆ ಪಕ್ಕಾ ಆದ್ರೆ ಎಷ್ಟು ಅನ್ನೋದೇ ಸಸ್ಪೆನ್ಸ್!

ಡಿಜಿಟಲ್ ಕನ್ನಡ ಟೀಮ್:

ಪಕ್ಷದಲ್ಲಿ ಭಿನ್ನಮತ ಶಮನಗೊಳಿಸಲು ಡಿಸಿಎಂ ಹುದ್ದೆಗಳ ಸೃಷ್ಟಿಗೆ ರಾಷ್ಟ್ರೀಯ ನಾಯಕರ ಸೂಚನೆ ನೀಡಿರುವ ಬೆನ್ನಲ್ಲೇ, ಇಂದು ಸಭೆಯಲ್ಲಿ ಖಾತೆ ಹಂಚಿಕೆ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.

ಡಿಸಿಎಂ ಹುದ್ದೆ ಕುರಿತು ನಿನ್ನೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಯಡಿಯೂರಪ್ಪ, ‘ಕೆಲವರಿಗೆ ಡಿಸಿಎಂ ಹುದ್ದೆ ನೀಡಲಾಗುವುದು. ಅದು ಎಷ್ಟು ಎಂಬುದು ಸೋಮವಾರ ಗೊತ್ತಾಗಲಿದೆ ಎಂದು ಹೇಳಿದ್ದರು.

ಮುಂಬರುವ ಉಪಚುನಾವಣೆಗೆ ಜಾತಿವಾರು ಲೆಕ್ಕಾಚಾರ, ಪಕ್ಷದಲ್ಲಿನ ಅಸಮಾಧಾನಕ್ಕೆ ಮದ್ದಾಗಿ ಡಿಸಿಎಂ ಹುದ್ದೆಯನ್ನು ಸೃಷ್ಟಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ವರದಿಗಳ ಪ್ರಕಾರ ಒಕ್ಕಲಿಗ ಕೋಟಾದಲ್ಲಿ ಆರ್.ಅಶೋಕ್ ಅಥವಾ ಅಶ್ವಥ್ ನಾರಾಯಣ, ನಾಯಕ ಕೋಟಾದಲ್ಲಿ ಶ್ರೀರಾಮುಲು,ಕುರುಬರ ಕೋಟಾದಲ್ಲಿ ಕೆ.ಎಸ್ ಈಶ್ವರಪ್ಪ, ದಲಿತ ಕೋಟಾದಿಂದ ಗೋವಿಂದ ಕಾರಜೋಳ ಅವರು ಡಿಸಿಎಂ ರೇಸ್ ನಲ್ಲಿ ಇದ್ದಾರೆ. ಹೀಗಾಗಿ ಎಷ್ಟು ಡಿಸಿಎಂ ಸ್ಥಾನ ಸೃಷ್ಟಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply