ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ; ಟ್ರಂಪ್ ಗೆ ಮೋದಿ ಮನವರಿಕೆ

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರ ವಿಚಾರವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ, ‘ಅದರ ಅಗತ್ಯ ಇಲ್ಲ’ ಎಂದು ಪ್ರಧಾನಿ ಮೋದಿ ಮನವರಿಕೆ ಮಾಡಿದ್ದಾರೆ.

ಫ್ರಾನ್ಸ್‍ನ ಬಿಯಾರ್ರಿಟ್ಜ್‍ನಲ್ಲಿ ನಡೆದ ಜಿ7 ಶೃಂಗಸಭೆಯ ಪ್ರಥಮ ಅಧಿವೇಶನದ ಬಳಿಕ ಮೋದಿ ಮತ್ತು ಟ್ರಂಪ್ ಪರಸ್ಪರ ಭೇಟಿಯಾಗಿ ಔಪಚಾರಿಕ ಚರ್ಚೆ ನಡೆಸಿದರು. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ವಿಚಾರವಾಗಿ ಉಭಯ ನಾಯಕರು ಮಾತನಾಡಿದ್ದು, ಈ ಸಂದರ್ಭದಲ್ಲಿ ‘ಕಾಶ್ಮೀರ ಸೇರಿದಂತೆ ಪಾಕಿಸ್ತಾನ ಮತ್ತು ಭಾರತ ನಡುವೆ ತಲೆದೋರಿರುವ ಎಲ್ಲಾ ವಿಷಯ ವಿವಾದಗಳು ದ್ವಿಪಕ್ಷೀಯ ಸ್ವರೂಪದ್ದಾಗಿದ್ದು , ಉಭಯ ದೇಶಗಳು ಇದನ್ನು ಬಗೆಹರಿಸಿಕೊಳ್ಳುತ್ತವೆ’ ಎಂದು ಮೋದಿ, ಟ್ರಂಪ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಕಾಶ್ಮೀರ ವಿಷಯದಲ್ಲಿ ಮೂರನೆ ವ್ಯಕ್ತಿ ಅಥವಾ ತೃತೀಯ ರಾಷ್ಟ್ರದ ಮಧ್ಯಸ್ಥಿಕೆ ಸಂಧಾನದ ಅಗತ್ಯವಿಲ್ಲ ಎಂಬುದನ್ನು ನೇರವಾಗಿ ಸ್ಪಷ್ಟ ಪಡಿಸಿದ್ದಾರೆ.

Leave a Reply