ಆಪ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ!

ಡಿಜಿಟಲ್ ಕನ್ನಡ ಟೀಮ್:

ಸಿಟ್ಟಿನ ಭರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತನಿಗೆ ಕಪಾಳಕ್ಕೆ ಹೊಡೆದ ಘಟನೆ ಬುಧವಾರ ಮೈಸೂರಿನಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ವಿಮಾನ ನಿಲ್ದಾನದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಂತರ ಹಿಂದಿರುಗಿದ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಆಪ್ತನ ಕಪಾಳಕ್ಕೆ ಬಾರಿಸಿ ಮುಂದೆ ಹೊರಟು ಹೋದರು.

ಸಿದ್ದರಾಮಯ್ಯ ಮಾಧ್ಯಮದವರ ಜತೆ ಮಾತನಾಡಿ ಬರುವಾಗ ಯಾರಿಗೋ ಫೋನ್ ಮಾಡಿ ಸಿದ್ದರಾಮಯ್ಯಗೆ ಕೊಟ್ಟರು. ಈ ವೇಳೆ ಕೋಪದಲ್ಲಿದ್ದ ಸಿದ್ದರಾಮಯ್ಯ ಮೊಬೈಲ್ ತಳ್ಳಿ ಆತನ ಕೆನ್ನೆಗೆ ಬಾರಿಸಿದರು.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆಪ್ತ, ‘ಸಿದ್ದರಾಮಯ್ಯ ನನಗೆ ತಂದೆ ಸಮಾನ. ಅವರು ಪ್ರೀತಿಯಿಂದ ಹೊಡೆದ್ರು. ಯಾರು ಅನ್ಯಾತಾ ಭಾವಿಸಬೇಡಿ. ಮೈಸೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ ಸಾರ್, ಮರಿಗೌಡ ಕಾಲ್ ಮಾಡಿ ಲೈನ್ ನಲ್ಲಿ ಇದ್ರು. ಸರಿ ಅಂತ ಆವಾಗ ನಾನು ಪೋನ್ ಕೊಡಲು ಮುಂದಾದೆ. ಏ ನಾನು ಸುಬ್ಬಯ್ಯ ಕಾರ್ಯಕ್ರಮಕ್ಕೆ ಹೊಗ್ತಿದ್ದಿನಿ ಅಂತಾ ಅಂದ್ರು, ಆ ವೇಳೆ ಪ್ರೀತಿಯಂದ ಹೊಡೆದ್ರು ಅಷ್ಟೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply