ಪ್ರಿಯಾಂಕಾರಿಗೆ ಉ.ಪ್ರ ಜವಾಬ್ದಾರಿ ! ಭವಿಷ್ಯದ ಕಾಂಗ್ರೆಸ್ ಸಾರಥಿ ಆಗ್ತಾರಾ ಜೂ. ಇಂದಿರಾ?

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಪಕ್ಷದಲ್ಲಿ ಮಹತ್ವದ ಬದಲಾವಣೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದು, ಪುತ್ರಿ ಪ್ರಿಯಾಂಕಾ ವಾದ್ರಾಗೆ ಉತ್ತರ ಪ್ರದೇಶದ ಸಂಪೂರ್ಣ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆನಂತರ ಬೇರೆ ಹಿರಿಯ ನಾಯಕರು ಪಕ್ಷದ ಉನ್ನತ ಹುದ್ದೆ ಅಲಂಕರಿಸಲು ಹಿಂದೇಟು ಹಾಕಿದ ಪರಿಣಾಮ ಸೋನಿಯಾ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ಹೊತ್ತಲ್ಲಿ ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶದ ಅಖಾಡಕ್ಕೆ ಪರಿಚಯಿಸಲಾಗಿತ್ತಾದರೂ ಪೂರ್ಣ ಪ್ರಮಾಣದಲ್ಲಿ ಜವಾಬ್ದಾರಿ ನೀಡಿರಲಿಲ್ಲ. ಈಗ ಉತ್ತರ ಪ್ರದೇಶದ ಸಂಪೂರ್ಣ ಹೊಣೆಯನ್ನು ಪ್ರಿಯಾಂಕಾ ಅವರಿಗೆ ವಹಿಸಲು ನಿರ್ಧರಿಸಿದ್ದಾರೆ.

ಇದರೊಂದಿಗೆ ಉತ್ತರಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಸಂಕಲ್ಪ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿರುವುದು ಸ್ಪಷ್ಟವಾಗಿದೆ. ಕೇವಲ ಉತ್ತರ ಪ್ರದೇಶ ಮಾತ್ರವಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ವೈಫಲ್ಯ ಕಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಪ್ರಿಯಾಂಕಾ ಅವರನ್ನು ಮಾಡಲು ಇದು ಮೊದಲ ಹಂತ ಎಂಬ ವಿಶ್ಲೇಷಣೆ ಮಾಡಲಾಗಿದೆ.

Leave a Reply