ಲ್ಯಾಂಡರ್ ವಿಕ್ರಂ ಇರುವ ಜಾಗ ಪತ್ತೆ! ಇಸ್ರೋ ಮುಖ್ಯಸ್ಥ ಶಿವನ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಭಾರಿ ನಿರೀಕ್ಷೆ ಮೂಡಿಸಿದ್ದ ಚಂದ್ರಯಾನ 2 ಯೋಜನೆಯ ಲ್ಯಾಂಡರ್ ‘ವಿಕ್ರಂ’ ಇರುವ ಜಾಗ ಪತ್ತೆಯಾಗಿದ್ದು, ಅದರ ಸಂಪರ್ಕ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

ಶನಿವಾರ ಕೇವಲ 2.1 ಕಿ.ಮೀ ಅಂತರ ಇರುವಾಗ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ನಂತರ ಇದೇ ಮೊದಲ ಬಾರಿಗೆ ಇಸ್ರೋ ಹೆಚ್ಚಿನ ಮಾಹಿತಿ ನೀಡಿದ್ದು, ಹೊಸ ಭರವಸೆಯ ಗೆರೆಗಳು ಮೂಡಿವೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವನ್, ‘ಥರ್ಮಲ್ ಇಮೇಜ್ ಮೂಲಕ ಚಂದ್ರನ ಮೇಲೆ ಲ್ಯಾಂಡರ್ ‘ವಿಕ್ರಂ’ ಇರುವ ಜಾಗ ಪತ್ತೆ ಹಚ್ಚಲಾಗಿದೆ. ಇನ್ನು ಲ್ಯಾಂಡರ್ ಜತೆಗೆ ಇನ್ನು ಸಂಪರ್ಕ ಸಾಧ್ಯವಾಗಿಲ್ಲ. ಅದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

Leave a Reply